ಹೈದರಾಬಾದ್ನ ಸಂಧ್ಯಾ ಥಿಯೇಟರ್ನ ಕಾಲ್ತುಳಿತ ಘಟನೆ ನಡೆದು ತಿಂಗಳೇ ಕಳೆದಿದೆ. ಈ ಘಟನೆಯಿಂದ ಅಲ್ಲು ಅರ್ಜುನ್ಗೆ ಸಾಕಷ್ಟು ತೊಂದರೆ ಆಗಿದೆ. ಕಾಲ್ತತುಳಿದಲ್ಲಿ ಅಲ್ಲು ಅರ್ಜುನ್ ಅಭಿಮಾನಿ ರೇವತಿ ಮೃತಪಟ್ಟಿದ್ದರು. ಅಲ್ಲದೆ, ಅವರ ಮಗ ಶ್ರೀತೇಜ್ ಗಾಯಗೊಂಡಿದ್ದರು.
ಚಿಕಿತ್ಸೆ ಪಡೆಯುತ್ತಿರುವ ಶ್ರೀ ತೇಜ್ ಅವರನ್ನು ಭೇಟಿ ಮಾಡಲು ಅಲ್ಲು ಅರ್ಜುನ್ ಇಂದು ಕಿಮ್ಸ್ ಆಸ್ಪತ್ರೆಗೆ ಹೋಗಿದ್ದಾರೆ. ಡಿಸೆಂಬರ್ 4 ರಂದು ಪುಷ್ಪ 2 ಚಿತ್ರದ ಪ್ರೀಮಿಯರ್ ಪ್ರದರ್ಶನದ ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ ಉಂಟಾದ ಕಾಲ್ತುಳಿತದಲ್ಲಿ ಶ್ರೀ ತೇಜ್ ಗಾಯಗೊಂಡಿದ್ದರು.
ಅಲ್ಲು ಅರ್ಜುನ್ ಜೊತೆಗೆ ತೆಲಂಗಾಣ FDC ಅಧ್ಯಕ್ಷ ಮತ್ತು ನಿರ್ಮಾಪಕ ದಿಲ್ ರಾಜು ಇದ್ದರು. ಮತ್ತೊಂದೆಡೆ ರಾಮ್ ಗೋಪಾಲ್ ಪೇಟ್ ಪೊಲೀಸರು ಆಸ್ಪತ್ರೆಯಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದರು. ಈ ಮೊದಲು ಅಲ್ಲು ಅರ್ಜುನ್ ಆಸ್ಪತ್ರೆಗೆ ಭೇಟಿ ನೀಡುವ ಆಶಯ ವ್ಯಕ್ತಪಡಿಸಿದ್ದರು. ಆದರೆ, ಇದಕ್ಕೆ ಪೊಲೀಸರು ಒಪ್ಪಿಗೆ ಕೊಟ್ಟಿರಲಿಲ್ಲ. ಈಗ ಪೊಲೀಸರ ಒಪ್ಪಿಗೆ ಪಡೆದು ಆಸ್ಪತ್ರೆಗೆ ಹೋಗಿದ್ದಾರೆ.