ವಿಜಯನಗರ : ಹೊಸಪೇಟೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಇಂದು ಸದಸ್ಯರು ಬಿಡುಗಡೆಯಾದ ಅನುದಾನದಲ್ಲಿ ಅಭಿವೃದ್ದಿ ಕಾಮಗಾರಿಗೆ ಬಿಡುಗಡೆಯಾದ ಹಣದಲ್ಲಿ ಹಂಚಿಕೆ ವಾರ್ ನಡೆದಿದೆ. ನಾನಾ ವಾರ್ಡ್ ಗಳ ಅಭಿವೃದ್ಧಿ ವಿಚಾರದಲ್ಲಿ ಪ್ರತಿ ವಾರ್ಡ್ ಗೆ 29 ಲಕ್ಷ ಅನುದಾನ ನೀಡಬೇಕು. ಯಾವ ವಾರ್ಡ್ ಗೆ ಅಭಿವೃದ್ಧಿ ಕಾಮಗಾರಿಗಳ ಅರ್ಜೆಂಟ್ ಇದೆ ಅವುಗಳಿಗೆ ಹಾಕಿ ಅಂತ ಸದಸ್ಯರು ಅಧ್ಯಕ್ಷರಿಗೆ ತಾಕೀತು ಮಾಡಿದ್ರು. ಹೊಸಪೇಟೆ ನಗರಸಭೆ ಅಧ್ಯಕ್ಷೆಯ ಅಪ್ಪಣೆ ಮೇರೆಗೆ ಹಲವು ವಾರ್ಡ್ ಗಳ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯಿತು.
ಇನ್ನು ವಿಚಾರದ ಬಗ್ಗೆ ಮಾತಿಗಿಳಿದ ಸದಸ್ಯರು, ನನ್ನ ವಾರ್ಡ್ ಗಳಿಗೆ 29 ಲಕ್ಷ ಹಣ ಮಂಜೂರು ಮಾಡಿ, ನಮಗೆ ಅನುದಾನ ನೀಡಿ ಅಂತ ವಾದ ಮಾಡಿದ್ರು. ನೀವು ಈ ಸಭೆಯಲ್ಲಿ ಅಪ್ರೋವ್ ಮಾಡಲಿಲ್ಲಾ ಅಂದ್ರೆ, ಇಂದಿನ ಸಭೆ ಯಾವುದು ಅಪ್ರೋವಲ್ ಆಗೋಲ್ಲಾ ಅಂತ ನಗರಸಭೆ ಸದಸ್ಯ ಗಾಳೆಪ್ಪ ಅವಾಜ್ ಹಾಕಿದ್ರು. ಈ ಸಂರ್ಧಭದಲ್ಲಿ ಕೆಲ ಕಾಲ ಸದಸ್ಯರ ನಡುವೆ ಗದ್ದಲ ನಡೆಯಿತು. ವಾದ, ವಿವಾದ ಜೋರು ನಡೆಯುತ್ತಿದ್ದರೂ ಅಧ್ಯಕ್ಷೆ ಲತಾ ಮಾತ್ರ ಗಪ್ ಚುಪ್ ಆಗಿ ಕುಳಿತಿದ್ದರು.