ಕಲಬುರಗಿ : 2 ವರ್ಷದ ಕಂದಮ್ಮಳನ್ನ ಕೊಲೆ ಮಾಡಿ ನೇಣು ಹಾಕಿ, ತಾಯಿ ಕೂಡ ನೇಣಿಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವಲೀಲಾ (23) ವರ್ಷಿತಾ (2) ನೇಣಿಗೆ ಶರಣಾದ ತಾಯಿ-ಮಗಳು. ಶಿವಲೀಲಾ ಚಿಂಚೋಳಿ ತಾಲ್ಲೂಕಿನ ಕೆರೋಳ್ಳಿ ಗ್ರಾಮದ ನಿವಾಸಿಯಾಗಿದ್ದು, ಮೂರು ವರ್ಷದ ಹಿಂದೆ ಮರಪಳ್ಳಿ ಗ್ರಾಮದ ಆನಂದ ಜೊತೆ ಮದುವೆಯಾಗಿದ್ದಳು. ಆದರೆ ನಿನ್ನೆ ಸಂಜೆ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಲೀಲಾ ಮದುವೆಯಾದ ಬಳಿಕ ಗಂಡ, ಅತ್ತೆ ವಿರುದ್ಧ ಕಿರುಕುಳ ಆರೋಪ ಮಾಡಿದ್ದರು. ಗಂಡ, ಅತ್ತೆಯ ಕಿರುಕುಳಕ್ಕೆ ತವರು ಮನೆಗೆ ಶಿವಲೀಲಾ ಬಂದಿದ್ದಳು. ಎರಡು ದಿನದ ಹಿಂದೆಯಷ್ಟೇ ಮತ್ತೆ ಶಿವಲೀಲಾ ಗಂಡನ ಮನೆ ಸೇರಿದ್ದಳು. ಆದರೆ ಅಲ್ಲಿ ಮಗುವಿನೊಂದಿಗೆ ನೇಣಿಗೆ ಶರಣಾಗಿದ್ದಾಳೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.