ಕೋಲಾರ : ಪತಿ ಪತ್ನಿಯ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಪತ್ನಿ ಕೆಲಸದಿಂದ ಮನೆಗೆ ಬರುವಾಗ ದಾರಿಯಲ್ಲಿ ಚಾಕುವಿನಿಂದ ಇರಿದು ಕೊಂದಿದ್ದಾನೆ , ಕೋಲಾರ ಜಿಲ್ಲೆಯ ಕೆಜಿಎಫ್ ನ ಸಂಜಯ್ ಗಾಂಧಿ ನಗರದಲ್ಲಿ ಘಟನೆ ನಡೆದಿದ್ದು , ಲೋಕೇಶ್ ಹಾಗೂ ಪವಿತ್ರ ಗಂಡ ಹೆಂಡತಿ ಯಾಗಿದ್ದು ಇಬ್ಬರ ಸಂಬಂಧ ಇತ್ತೀಚಿನ ಕೆಲದಿನಗಳಿಂದ ಹದಗೆಟ್ಟಿದ್ದು ಜಗಳದ ವಿಚಾರವಾಗಿ ಪೋಲಿಸ್ ಠಾಣೆ ಮೆಟ್ಟಿಲು ಸಹ ತಲುಪಿದ್ದು ಪವಿತ್ರ ಕಡೆಯಿಂದ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿತ್ತು.
ಹತ್ಯೆಯಾದ ಮಹಿಳೆ ಪವಿತ್ರ (36) ಬುದವಾರ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಹಿಂತಿರುಗುವಾಗ ಪತಿ ಲೋಕೇಶ್ ದಾರಿಯಲ್ಲೆ ಚಾಕುವಿನಿಂದ ಹಲವು ಬಾರಿ ಇರಿದಿದ್ದು , ತೀವ್ರ ರಕ್ತಸ್ರಾವವಾಗಿ ಆಕೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅಸುನೀಗಿದ್ದಾಳೆ . ಕೊಲೆ ಮಾಡಿದ ಬಳಿಕ ಪತಿ ಲೋಕೇಶ್ ನಾಪತ್ತೆ ಯಾಗಿದ್ದು , ಈ ಸಂಬಂಧ ಉರಿಗಾಂ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದು , ಘಟನೆ ನಡೆದ ಸ್ಥಳಕ್ಕೆ ಕೆಜಿಎಪ್ ಎಸ್. ಪಿ .ಶಾಂತಕುಮಾರ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಒಟ್ಟಿನಲ್ಲಿ ಪತಿ ಪತ್ನಿಯ ಜಗಳ ಕೊಲೆಯಲ್ಲಿ ಅಂತ್ಯವಾಗಿರುವುದು ದುರಂತವೇ ಸರಿ .