Thursday, May 1, 2025
25.2 C
Bengaluru
LIVE
ಮನೆ#Exclusive NewsTop Newsಗಾಂಧೀಜಿ ತತ್ವಗಳಿಗೆ ನೂರರ ಸತ್ವ: ಡಿ.ಕೆ.ಶಿವಕುಮಾ‌ರ್

ಗಾಂಧೀಜಿ ತತ್ವಗಳಿಗೆ ನೂರರ ಸತ್ವ: ಡಿ.ಕೆ.ಶಿವಕುಮಾ‌ರ್

ಬೆಂಗಳೂರು:  ಜೈ ಬಾಪು, ಜೈ ಭೀಮ್, , ಜೈ ಸಂವಿಧಾನ’. ಈ ಮೂರು ಪದಗಳು ನವ ಭಾರತದ ಶಕ್ತಿಮಂತ್ರಗಳು. ಈ ನೆಲದ ಜನಸಾಮಾನ್ಯನ ಶ್ರೀ ಮಂತ್ರಗಳು, ಭಾರತದ ಸ್ವಾಭಿಮಾನವನ್ನು ಬಡಿದೆಬ್ಬಿಸಿದ್ದೇ ಈ ಮೂರು ತತ್ವಗಳು, ಸತ್ವಗಳು. ಈ ಕಾರಣಕ್ಕೆ ಗಾಂಧೀಜಿ ಅವರು ಕರ್ನಾಟಕ ಎನ್ನುವ ಸದಭಿಮಾನದ ಗೂಡಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿಸಿದ 100 ವರ್ಷಗಳಸಂಭ್ರಮಾಚರಣೆಗೆ ‘ಜೈಬಾಪು,ಜೈಭೀಮ್,ಜೈ ಸಂವಿಧಾನ’ ಎಂದು ನಾಮಕರಣ ಮಾಡಲಾಗಿದೆ.

ಗಾಂಧೀಜಿ ಅವರು ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ಯಾರೂ ವಿರಮಿಸಬಾರದು. ಸ್ವಾತಂತ್ರ್ಯ ಪಡೆಯುವುದೇ ನಮ್ಮ ಗುರಿ ಎಂದು 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರತಿಪಾದಿಸಿದ್ದರು. ಹೌದು ಈ ಮಾತನ್ನು ನಾವು ಎಂದೆಂದಿಗೂ ಕಾಪಿಟ್ಟುಕೊಳ್ಳಬೇಕಿದೆ. ಗಾಂಧೀಜಿ ಅವರ ತತ್ವ ಸಿದ್ಧಾಂತಗಳ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವುದರ ಜತೆಗೆ ನಮ್ಮ ಸಂವಿಧಾನ ರಕ್ಷಣೆಯ ಸಂಕಲ್ಪಕ್ಕೆ 2025 ಜ.21ರಂದು ಬೆಳಗಾವಿಯಲ್ಲಿ ನಡೆಯಲಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶವನ್ನು ಮುನ್ನುಡಿಯಾಗಿಸಬೇಕಿದೆ.

ಕಳೆದ ವರ್ಷದ ಡಿ.27ರಂದು ಇಡೀ ದೇಶವೇ ಐತಿಹಾಸಿಕ ಸಮಾವೇಶಕ್ಕೆ ಸಾಕ್ಷಿಯಾಗುತ್ತಿದ್ದ ವೇಳೆಯಲ್ಲಿಯೇ ಅನಿರೀಕ್ಷಿತವಾಗಿ ಈ ದೇಶದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಇಹಲೋಕ ತ್ಯಜಿಸಿದರು. ಈ ಕಾರಣಕ್ಕಾಗಿ ಗಾಂಧಿ ಭಾರತ ಕಾರ್ಯಕ್ರಮವನ್ನು ಮುಂದೂಡಲಾಯಿತು. ಈ ದೇಶದ ಪ್ರಧಾನಿಯಾಗಿ ಗ್ರಾಮೀಣ ಭಾಗದ ಜನರು ಬದುಕನ್ನು ಹಸನುಗೊಳಿಸಲು ಮಹಾತ್ಮಾ ಗಾಂಧೀಜಿ ಅವರ ಹೆಸರಿನಲ್ಲಿ ನರೇಗಾ ಯೋಜನೆ ರೂಪಿಸಿದವರು ಅವರು. ಇತಿಹಾಸ ನನ್ನನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ ಎಂದು ಟೀಕೆಗಳಿಗೆ ಉತ್ತರಿಸಸಿದವರು. ದೇಶವೇ ಎನ್ನುವ ಗಾಂಧೀಜಿಯವರು ಆಶಯದೊಂದಿಗೆ ಬದುಕಿದ ಮನಮೋಹನ್ ಸಿಂಗ್ ಅವರನ್ನು ಲೇಖನದ ಹಾದಿಯಲ್ಲಿಯೇ ನೆನೆಯುವುದು ನನ್ನ ಕರ್ತವ್ಯ.

ಬಾಪು ಅವರೇ ಹೇಳುವಂತೆ ತನ್ನ ಕರ್ತವ್ಯವನ್ನು ಸರಿಯಾಗಿಮಾಡುತ್ತಿರುವವನಿಗೆ ಜಗತ್ತು ಎಂದಿಗೂ ಬೇಸರ ಎನಿಸುವುದಿಲ್ಲ’, ಗಾಂಧೀಜಿ ಅವರ ಈ ಮಾತೇ ನನ್ನ ಅನೇಕ ಕೆಲಸಗಳಿಗೆ ಪ್ರೇರಣೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರವಹಿಸಿಕೊಂಡ ಮೇಲೆಯೂ ಇದೇ ಹಾದಿಯಲ್ಲಿ ನಡೆದಿದ್ದೇನೆ, ಕಾರ್ಯಕ್ರಮಗಳನ್ನು ರೂಪಿಸಿದ್ದೇನೆ. ಮೇಕೆದಾಟು ಪಾದಯಾತ್ರೆ, ಸ್ವಾತಂತ್ರ್ಯ ನಡಿಗೆ ಸೇರಿದಂತೆ ಅನೇಕಪಾದಯಾತ್ರೆಗಳ ಹಿಂದಿರುವ ಶಕ್ತಿಯೇ ಬಾಪು. ಅಲ್ಲದೇನಮ್ಮ ಸರ್ಕಾರ ನೀಡುತ್ತಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಗಾಂಧಿವಾದವೇ ಪ್ರೇರಣೆ. 2010ರಲ್ಲಿ ಕೈಗೊಂಡ ಬಳ್ಳಾರಿ ಪಾದಯಾತ್ರೆ, ಸೋನಿಯಾ ಗಾಂಧಿಯವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯನಾಯಕರಾಹುಲ್‌ ಗಾಂಧಿ ಅವರನೇತೃತ್ವದಲ್ಲಿ 2022ರಲ್ಲಿ ನಡೆಸಿದ ಭಾರತ್ ಜೋಡೋ ಯಾತ್ರೆಗೆ ಮಹಾತ್ಮನ ಹೋರಾಟದ ಹಾದಿಯೇ ಬಲ. ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ, ಕಾಲೇಜುಗಳಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿರುವ ಗಾಂಧೀಜಿಯವರ ಭಾವಚಿತ್ರ ಹಾಗೂ ಅವರು ಹೇಳಿದ ಏಳು ಸಾಮಾಜಿಕ ಪಾಪಗಳ ಪದ ಫಲಕ ಅಳವಡಿಸುವುದನ್ನು ನಮ್ಮ ಸರ್ಕಾರಕಡ್ಡಾಯಮಾಡಿದೆ. ಜೊತೆಗೆ ರಾಜ್ಯದಎಲ್ಲಾ ಸರ್ಕಾರಿಕಚೇರಿಗಳಲ್ಲೂ ಈ ಭಾವಚಿತ್ರ ಹಾಕಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments