ಹುಬ್ಬಳ್ಳಿ:  ಬೆಂಗಳೂರು – ಹುಬ್ಬಳ್ಳಿ ಜನಶತಾಬ್ದಿ ರೈಲು ಇನ್ನು ಮುಂದೆ ಪ್ಲಾಟ್ ಫಾರ್ಮ್ 2 ರಿಂದ ಸಂಚರಿಸಲಿದೆ. ಸಚಿವ ಪ್ರಹ್ಲಾದ ಜೋಶಿ ಸೂಚನೆ ಮೇರೆಗೆ ಮಾರ್ಚ್ 1 ರಿಂದ ಬದಲಾವಣೆ ಜಾರಿಗೆ ಕ್ರಮ ತರಲಾಗಿದೆ.

ಟ್ರೈನ್ ನಂಬರ್ 12079/80 ಹುಬ್ಬಳ್ಳಿ-ಬೆಂಗಳೂರು- ಹುಬ್ಬಳ್ಳಿ ಮಧ್ಯೆ ಸಂಚರಿಸುವ ಜನಶತಾಬ್ದಿ ರೈಲನ್ನು ಪ್ರಯಾಣಿಕರ ಅನುಕೂಲಕ್ಕಾಗಿ 2ನೇ ಪ್ಲಾಟ್ ಫಾರ್ಮ್ ನಿಂದ ಸಂಚರಿಸುವಂತೆ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.ಈ ಬದಲಾವಣೆ ಮಾರ್ಚ್ 1ರಿಂದ ಜಾರಿಯಾಗಲಿದೆ. ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ, ಈ ರೈಲು ಸಂಚಾರದ ವ್ಯವಸ್ಥೆಯನ್ನು ಸುಗಮಗೊಳಿಸಿದೆ.

ಈ ಜನಶತಾಬ್ದಿ ರೈಲು ಸದ್ಯ ಕಾರಣಾಂತರದಿಂದ ಹುಬ್ಬಳ್ಳಿ ನಿಲ್ದಾಣದಲ್ಲಿ ಆರನೇ ಪ್ಲ್ಯಾಟ್ ಫಾರ್ಮ್ನಿಂದ ಸಂಚರಿಸುತ್ತಿತ್ತು. ಇದರಿಂದ ಹುಬ್ಬಳ್ಳಿಯಿಂದ ಹೊರಡುವ ಪ್ರಯಾಣಿಕರಿಗೆ ತೊಡಕಾಗಿ ಪರಿಣಮಿಸಿತ್ತು. ಇದನ್ನು ಗಮನಿಸಿದ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಅವರು, ಹುಬ್ಬಳ್ಳಿ ಭಾಗದಿಂದ ಸಂಚರಿಸುವ ಪ್ರಯಾಣಿಕರಿಗೆ ಈ ರೈಲು ಪ್ರಮುಖವಾಗಿದ್ದು, ಪ್ಲಾಟ್ ಫಾರ್ಮ್ ಬದಲಾವಣೆ ಮಾಡುವಂತೆ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿದ್ದಾರೆ.ಸಚಿವರ ಸೂಚನೆ ಮೇರೆಗೆ ರೈಲ್ವೆ ಅಧಿಕಾರಿಗಳು ಜನಶತಾಬ್ದಿ ರೈಲನ್ನು ಹುಬ್ಬಳ್ಳಿ ರೈಲು ನಿಲ್ದಾಣದ ಎರಡನೇ ಪ್ಲಾಟ್ ಫಾರ್ಮ್ನಿಂದ ಸಂಚರಿಸುವಂತೆ ಕ್ರಮ ಕೈಗೊಂಡಿದ್ದಾರೆ.

By admin

Leave a Reply

Your email address will not be published. Required fields are marked *

Verified by MonsterInsights