Top Newsರಾಜಕೀಯಸುದ್ದಿ

ಅವಧಿಪೂರ್ಣ ಸಿದ್ಧರಾಮಯ್ಯನವರೇ ಸಿಎಂ- ಶಾಸಕ ಅಬ್ಬಯ್ಯ ವಿಶ್ವಾಸ

ಹುಬ್ಬಳ್ಳಿ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ಧರಾಮಯ್ಯನವರಿಗೆ ಗೆಲುವು ನಿಶ್ಚಿತ. ನಲವತ್ತು ವರ್ಷಗಳ ಜನಪ್ರೀಯ ರಾಜಕಾರಣದಲ್ಲಿ ಯಾವುದೇ ಒಂದು ಕಳಂಕವಿಲ್ಲದೆ ರಾಜಕೀಯ ಮಾಡಿದ್ದಾರೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾವನ್ನು‌ ಮುಂದಿಟ್ಟುಕೊಂಡು ಸಿದ್ಧರಾಮಯ್ಯನವರ ಗೌರವಕ್ಕೆ ಕಳಂಕ ತರುವ ಕಾರ್ಯವನ್ನು ಮಾಡುವುದಲ್ಲದೇ, ಘನತೆಗೆ ದಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಈ ಒಂದು ಪ್ರಕರಣದಿಂದ ಸಿದ್ಧರಾಮಯ್ಯನವರ ಗೌರವಯುತವಾಗಿ ನಿರ್ದೋಷಿಯಾಗಿ ಹೊರ ಬರುತ್ತಾರೆ ಎಂಬ ಭರವಸೆ ಇದೆ. ಬಿಜೆಪಿಯವರಿಗೆ ಉತ್ತಮ ರೀತಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ನೋಡಿ ತಳಮಳ ಸೃಷ್ಟಿಯಾಗಿದೆ. ಹೇಗಾದರೂ ಮಾಡಿ ಅಡ್ಡಗಾಲು ಹಾಕಬೇಕು ಎಂದು ಕುತಂತ್ರ ಮಾಡುತ್ತಿದ್ದಾರೆ. ಆದರೆ ಅವಧಿಪೂರ್ಣ ಸಿಎಂ ಸಿದ್ಧರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಹೈ ಕಮಾಂಡ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Comments (0)

Your email address will not be published. Required fields are marked *

Back to top button