ಹುಬ್ಬಳ್ಳಿ; ಲೋಕಸಭಾ ಚುನಾವಣೆಗೆ ಕೆಲವೇ ಕಲವು ತಿಂಗಳು ಬಾಕಿ ಉಳಿದಿದ್ದು, ಈಗ ಚುನಾವಣೆಯ ಕಾವು ದಿನ ಕಳೆದಂತೆ ಜೋರಾಗುತ್ತಿದೆ. ಈಗಾಗಲೇ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ಚುನಾವಣೆ ಸಿದ್ಧತೆ ನಡೆಸುತ್ತಿದ್ದು, ಇದರ ಮಧ್ಯ ಈಗ ಅವಳಿನಗರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಪೋಸ್ಟರ್ ವಾರ್ ಆರಂಭವಾಗಿದೆ.
ಇದೇ ಫೆ.14 ರಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಜತ್ ಉಳ್ಳಾಗಡ್ಡಿಮಠ ರಜತ್ ಸಂಭ್ರಮದ ಮೂಲಕ ಪರೋಕ್ಷವಾಗಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಗಿರಣಿಚಾಳದ ಭಗವಾನ್ ಮೈದಾನದಲ್ಲಿ ರಾಷ್ಟ್ರ ಧ್ವಜ ತಯಾರಿಕರಿಗೆ ಸನ್ಮಾನ ಸೇರಿ ನಗೆ ಹಬ್ಬ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅದರ ಪ್ರಚಾರ್ಥವಾಗಿ ಅಂಟಿಸಲಾದ ಪೋಸ್ಟರ್ ಮೇಲೆ ಟಾರ್ಗೆಟ್ ಮಾಡಿ ಬಿಜೆಪಿ ಕಾರ್ಯಕರ್ತರು ಮತ್ತೊಮ್ಮೆ ಮೋದಿ ಪೋಸ್ಟರ್ ಅಂಟಿಸುತ್ತಿದ್ದಾರೆ. ಇವರ ವಿರುದ್ದ ಕ್ರಮ ಕೈಗೊಳ್ಳಲು ರಜತ್ ಒತ್ತಾಯ ಮಾಡಿದ್ದಾರೆ.
ಗೋಪನಕೊಪ್ಪ ಸೇರಿದಂತೆ ಹಲವು ಕಡೆಗಳಲ್ಲಿ ರಜತ್ ಸಂಭ್ರಮದ ಪೋಸ್ಟರ್ ಮೇಲೆ ಬಿಜೆಪಿ ಕಾರ್ಯಕರ್ತರು ಮತ್ತೊಮ್ಮೆ ಮೋದಿ ಪೋಸ್ಟರ್ ಅಂಟಿಸುತ್ತಿರುವುದಾಗಿ ಕಾಂಗ್ರೆಸ್‌ನ ರಜತ್ ಸೇರಿದಂತೆ ಕಾರ್ಯಕರ್ತರ ಆಕ್ರೋಶ ಕೇಳಿ ಬಂದಿದೆ. ಜೊತೆಗೆ ಇದರ ಸೂಕ್ಷ್ಮವಾಗಿ ನೋಡಿದಲ್ಲಿ ಬಿಜೆಪಿಯ ಹಾಲಿ ಧಾರವಾಡ ಲೋಕಸಭೆ ಸಂಸದ ಪ್ರಹ್ಲಾದ್ ಜೋಶಿ ಪೋಸ್ಟರ್ ಮೇಲೆಯೇ ಕೆಲವು ಕಡೆ ಕಾಂಗ್ರೆಸ್ ರಜತ್ ಸಂಭ್ರಮ ಫಸ್ಟರ್ ಹಾಕಿರುವುದು ಕಂಡು ಬರುತ್ತಿವೆ. ಸದ್ಯ ಈಗ ಲೋಕಸಭಾ ಚುನಾವಣೆ ಸಮೀಪತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪೋಸ್ಟರ್ ವಾರ್ ಜೋರಾಗಿದೆ.