Wednesday, January 28, 2026
27.9 C
Bengaluru
Google search engine
LIVE
ಮನೆರಾಜಕೀಯರಾಮ ಮಂದಿರ ಮುಂದಿಟ್ಟು ಬಿಜೆಪಿ ರಾಜಕಾರಣ ಮಾಡ್ತಿದೆ; ಶಾಸಕ ಅಬ್ಬಯ್ಯ ಕಿಡಿ

ರಾಮ ಮಂದಿರ ಮುಂದಿಟ್ಟು ಬಿಜೆಪಿ ರಾಜಕಾರಣ ಮಾಡ್ತಿದೆ; ಶಾಸಕ ಅಬ್ಬಯ್ಯ ಕಿಡಿ

ಹುಬ್ಬಳ್ಳಿ : ರಾಮ ಜನ್ಮಭೂಮಿ ಹೋರಾಟಗಾರ ಅರೆಸ್ಟ್ ವಿಚಾರ, ಪೋಲಿಸರು ತಮ್ಮ ರೋಟಿನ್ ವರ್ಕ್ ಮಾಡಿದ್ದಾರೆ. ಬಿಜೆಪಿಗೆ ಚುನಾವಣೆ ಸಮಯದಲ್ಲಿ ಯಾವುದಾದರೂ ಒಂದು ವಿಷಯ ಬೇಕು, ರೋಟಿನ್ ವರ್ಕ್ ಗೆ ಬಣ್ಣ ಹಚ್ಚಿ, ಬೇರೆ ತರಹದ ಮೇಸೆಜ್ ಪಾಸ್ ಮಾಡಿ ಜನರ ಕೋಮು ಸೌಹಾರ್ದತೆ ಹಾಳು ಮಾಡೋದು ಬಿಜೆಪಿ ಮೊದಲಿನಿಂದಲೂ ‌ಮಾಡುತ್ತಿದೆ. ರಾಮ ಮಂದಿರ ಕೇಸ್ ರೀ ಒಪನ್ ಬಗ್ಗೆ ಶಾಸಕ ಪ್ರಸಾದ ಅಬ್ಬಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆರ್ ಅಶೋಕ್ ಅವರು ವಿಪಕ್ಷ ನಾಯಕನಾಗಿ ಅಭಿವೃದ್ಧಿ ವಿಚಾರವಾಗಿ ಪ್ರತಿಭಟನೆ ಮಾಡಲಿ, ಅದು ಬಿಟ್ಟು ಯಾವೋದೋ ವಿಚಾರ ಇಟ್ಟಕೊಂಡು ಎಲೆಕ್ಷನ್ ಗಿಮಿಕ್ ಮಾಡೋದು ಸರಿಯಲ್ಲಾ. ಇದು ಯಾವೋದೋ ಒಂದು ಪ್ರಕರಣ ಇದಕ್ಕೆ ಅದನ್ನು ದೊಡ್ಡದು ಮಾಡಿ ಗಲಾಟೆ ಮಾಡೋದು ಎಷ್ಟರಮಟ್ಟಿಗೆ ಸರಿ..?. ಬಿಜೆಪಿಗರಿಗೆ ಬೇರೆ ವಿಷಯ ಇಲ್ಲ, ಯಾವ ವಿಚಾರ ಮಾಡಲ್ಲ, ಜನ ಸರ್ಕಾರದ ಮೆಚ್ಚುಗೆ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಅಳಿಸಿ ಹಾಕಲು ಕೋಮು ಭಾವನೆಗೆ ಬೆಂಕಿ ಹಚ್ಚುವ ಕೆಲಸ ಬಿಜೆಪಿ ಮಾಡಿಕೊಂಡು ಬಂದಿದೆ. ಸುಮ್ಮನೆ ರಾಮ‌ ಮಂದಿರ ತೆಗೆದುಕೊಂಡು ಗಲಭೆ ಬೇಡ,
ಈಗ ರಾಮ‌ ಜನ್ಮಭೂಮಿ‌ ಕೇಸ್ ಅಂತ ಮಾತನಾಡುತ್ತಾರೆ ಆದರೆ ಪೋಲಿಸರು ಇದನ್ನು ಏನು ನೋಡಿಕೊಂಡು ಮಾಡಿದ್ದಾರಾ..? ಪೋಲೀಸರು ಜನರಲ್ ಆಗಿ ಪೆಂಡಿಂಗ್ ಕ್ಲಿಯರ್ ಮಾಡಿದ್ದಾರೆ. ಬಿಜೆಪಿಗರು ತಮಗೆ ಹೇಗೆ ಬೇಕೊ‌ ಹಾಗೇ ತಿರುಚಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಸಾದ ಸುಬ್ಬಯ್ಯ ಕಿಡಿಕಾರಿದರು.

ಹುಬ್ಬಳ್ಳಿ ಈದ್ಗಾ ವಿಷಯದಿಂದ ಬಿಜೆಪಿ ದೇಶದಲ್ಲಿ ನಲೆಯೂರಿತ್ತು ಈಗ ಇಂತಹದ್ದೆ ವಿಷಯ ಹುಡುಕುತ್ತಾರೆ. ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ, ಗೊಂದಲ ಸೃಷ್ಟಿ ಮಾಡೋದು, ಜನರ ಭಾವನೆಗೆ ಧಕ್ಕೆ ತರೋದೆ ಬಿಜೆಪಿ ಅಜೆಂಡಾ ಎಂದರು. ಹಳೇ ಹುಬ್ಬಳ್ಳಿ ಗಲಭೆಯಲ್ಲಿ 90% ಅಮಾಯಕರನ್ನು ವರ್ಷಾನುಗಟ್ಟಲೆ ಜೈಲಿಗೆ ಹಾಕಿ ಹಾಳು ಮಾಡಿದ್ದು ರಾಜಕಾರಣ ಅಲ್ವಾ, ಇದು ಕೋರ್ಟ್ ನಿರ್ದೇಶನ ಪ್ರಕರಣದ ತನಿಖೆ ನಡೆದಿದೆ. ಆರೋಪಿಗಳು ಇಳಿಯ ವಯಸ್ಸಿನಲ್ಲಿ ಇದ್ದಾರೆ ಅಂದ್ರೆ, ಅಮಾಯಕರು ಇಷ್ಟು ವರ್ಷ ಸತ್ತಿಲ್ವಾ ಎಂದು ಅಬ್ಬಯ್ಯ ಪ್ರಶ್ನಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments