ಹುಬ್ಬಳ್ಳಿ : ಹೆಣ್ಣು, ಹೊನ್ನು, ಮಣ್ಣು ಈ ಮೂರರ ಹಿಂದೆ ಅತೀಯಾಗಿ ಬೀಳಬಾರದು ಎಂದು ನಮ್ಮ ಹಿರಿಕರು ಈ‌ ಹಿಂದೆಯೇ ಹೇಳಿದ್ದಾರೆ. ಆದರೆ ಇಲ್ಲೊಬ್ಬ ಈ ಮೂರರಲ್ಲಿ ಒಂದರ ಹಿಂದೆ ಬಿದ್ದು, ತನ್ನ ಕುಚುಕನಿಂದಲೇ ಕೊಲೆಯಾಗಿದ್ದಾನೆ. ಏನದೂ ಅಂತೀರಾ ಅದರ ಕಂಪ್ಲಿಟ್ ಕಾಹಾನಿ ಇಲ್ಲಿದೆ ನೋಡಿ….

ಈ ಪೋಟೋದಲ್ಲಿರುವ ಯುಕನೊಮ್ಮೆ ನೋಡಿ, ಹಿರೋ ತರಾ ಪೋಸ್ ಕೊಡ್ತಾ ಅರಾಮಾಗಿ ತನ್ನ ಕೆಲಸ ಮಾಡಿಕೊಂಡ ಇದಿದ್ದರೆ. ಇವತ್ತು ನಾವು ಇತನ ಬಗ್ಗೆ ಹೇಳಬೇಕಾಗಿಯೇ ಬರುತ್ತಿರಲಿಲ್ಲ. ಪೊಟೋದಲ್ಲಿ ಹಿರೋ ತರಹವಿರುವ ಇತನ ಹೆಸರು ವಿಜಯ ಬಸವಾ ಅಂತಾ, ಹುಬ್ಬಳ್ಳಿಯ ಹೆಗ್ಗರಿಯ ಮಾರುತಿನಗರ ನಿವಾಸಿಗಿದ್ದ, ಆದರೆ ಜನೆವರಿ 30, ಅಂದರೆ ತಿಂಗಳ ಕೊನೆಯ ದಿನದ ಒಂದು ದಿನ ಮುಂಚೆ ರಾತ್ರಿ, ಆತನಿಗೂ ಕೊನೆಯ ದಿನ ಆಗುತ್ತೆ ಅಂತಾ ಅಂದುಕೊಂಡಿರಲಿಲ್ಲ, ಮನೆಯರು ಮಗ ಗೆಳೆಯರ ಜೊತೆಗೆ ಹೋಗಿರಬಹುದು ಅಂದು ಕೊಂಡು ಎಲ್ಲರೂ ಮಲಗಿದ್ದರು. ಆದರೆ ವಿಜಯ ಬಸವನ ಮನೆಗೆ ಮುಂಜಾನೆ ಆಗುತ್ತಿದಂತೆ ಬಂದಿದ್ದು, ಅದೊಂದು ಅವರ ಪಾಲಿಗೆ ಕೆಟ್ಟ ಸುದ್ದಿಯಾಗಿತ್ತು. ಸಿಮ್​ ಕಾರ್ಡ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ವಿಜಯ ಬಸವನ ಮೊಬೈಲ್ ಬುಧವಾರ ಸ್ವಿಚ್ಚಾಫ್ ಆಗಿದೆ. ಗುರುವಾರ ಮುಂಜಾನೆ ವಿಜಯ ಬಸವ‌ ಶವವಾಗಿ ಪತ್ತೆಯಾಗಿದ್ದು, ಕುಟುಂಬಸ್ಥರಿ ಈ ಹತ್ಯೆ ಯಾಕೆ ಆಯಿತು ಅಂತಾ ಯೋಚನೆ ಮಾಡದ ಸ್ಥಿತಿ ನಿರ್ಮಿಸಿತ್ತು. ‌

ಕಳೆದ ಬುಧುವಾರ ತಡರಾತ್ರಿ ಹುಬ್ಬಳ್ಳಿ ಹೃದಯ ಭಾಗದ ಚೆನ್ನಮ್ಮ ವೃತದಿಂದ ಕಾರವಾರ ಹೋಗುವ ರಸ್ತೆ ಸುಮಾರು ಒಂದವರೇ ಕಿಲೋಮೀಟರ್ ಅಂತರದಲ್ಲಿ ಅಂದರೆ, ಎಂಟಿಎಸ್ ಕಾಲೋನಿಯ ಹತ್ತಿರದ ನಿರ್ಜನ ಪ್ರದೇಶದಲ್ಲಿ ವಿಜಯ ಬಸನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬವಾಗಿ ಕೊಲೆ ಮಾಡಿ, ನಂತರ ಪೆಟ್ರೊಲ್ ತಂದು ಸುರಿದು ಮೃತದೇಹವನ್ನು ಸುಟ್ಟು ಹಾಕಲಾಗಿತ್ತು.‌ ಮುಂಜಾನೆ ನಿದ್ದೆಯಿಂದ ಎದಿದ್ದ ಸ್ಥಳೀಯರಿಗೆ ಇದೊಂದು ಶಾಕ್ ನ್ಯೂಸ್ ಆಗಿತ್ತು. ಅರೆಬೆಂದ ಸ್ಥಿತಿಯಲ್ಲಿ ಬಿದಿದ್ದ ಶವ ನೋಡಿದ ಸ್ಥಳೀಯರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರಿಗೂ ಮೃತದೇಹ ನೋಡಿ ಶಾಕ್ ಆಗಿತ್ತು, ಶ್ವಾನದಳ ಜೊತೆಗೆ ಪೊಲೀಸರು ಫೀಲ್ಡಗೆ ಇಳಿದಿದ್ದರು. ಸ್ವತಃ ಅಂದೂ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತರಾದ ರೇಣುಕಾ ಮೇಡಂ ಅವರು ಸ್ಥಳಕ್ಕೆ ಭೇಟಿ ನೀಡಿ, ಠಾಣಾ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ತನಿಖೆಗೆ ವಿಶೇಷ ತಂಡಗಳನ್ನು ರಚನೆ ಮಾಡಿದರು.

ಇನ್ನೂ ಯಾವುದೇ ಅನುಮಾನ ವ್ಯಕ್ತಪಡಿಸದ ಕುಟುಂಬಸ್ಥರ ಕಡೆಯಿಂದ ದೂರು ಪಡೆದುಕೊಂಡ ಪೊಲೀಸರು ತನಿಖೆ ಮುಂದಾಗಿದ್ದರು. ಆದರೆ ಪೊಲೀಸರಿಗೆ ಇದೊಂದ ಪಾರ್ಟಿ ನೆಪದಲ್ಲಿ ಕರೆದುಕೊಂಡು ಬಂದು ಹತ್ಯೆ ಮಾಡಿರುವ ಅನುಮಾನ ಮೃತ ದೇಹ ನೋಡಿದಾಗ್ಲೇ ವಾಸನೆ ಬಂದಿತ್ತು. ಕಾಲ್ ಲೀಸ್ಟ್ ಸೇರಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡ ವೇಳೆಯಲ್ಲಿ ಕೊಲೆಯ ಅಸಲಿ ಕಾರಣ ಏನು ಎಂಬುವುದು ಗೊತ್ತಾಗಿತ್ತು. ಇದರ ಹಿಂದೆ ಒಂದು ಹೆಣ್ಣಿನ ಕಥೆ ಇದೆ ಅನ್ನುವುದು ಸ್ಪಷ್ಟವಾಗುತ್ತಿದಂತೆ, ವಿಚಾರಣೆ ತೀವ್ರಗೊಳಿಸಿದಾಗ, ಅಲ್ಲಿ ಅಸಲಿ ಕೊಲೆ ಆರೋಪಿ ಕಮ್ ವಿಜಯ ಬಸವನ ಸ್ನೇಹಿತ ಅಜರ ಎನ್ನುವುದು ಪೊಲೀಸರಿಗೆ ತಿಳಿಯುತ್ತಿದಂತೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ಅಸಲಿ ಕಹಾನಿಯ ಪುರಾಣವನ್ನು ಅಜರ್ ಪೊಲೀಸರ ಮುಂದೆ ತೆರದಿಟ್ಟಿದ್ದಾನೆ.

ವಿಜಯ ಬಸವ ಹಾಗೂ ಅಜರ್ ಇಬ್ಬರು ಸ್ನೇಹಿತರು. ವಿಜಯ ಬಸವ ಹುಬ್ಬಳ್ಳಿಯ ಸಿಮ್​ ಕಂಪನಿವೊಂದರಲ್ಲಿ ಟೀಂ ಮ್ಯಾನೇಜರಾಗಿ‌ ಕೆಲಸ ಮಾಡುತ್ತಿದ್ದನ್ನು. ಅಜರ್ ತನ್ನ ಪತ್ನಿಯ ನಂಬರ ಪೋರ್ಟ ಮಾಡಿಸುವ ವಿಚಾರವಾಗಿ‌ ತನ್ನ ಸ್ನೇಹಿತ ಅಜರನೊಂದಿಗೆ ವಿಚಾರ ಹಂಚಿಕೊಂಡಿರುತ್ತಾನೆ. ಅದನ್ನು ನಾನು ಮಾಡಿಕೊಡುತ್ತೇನೆ ಎಂದು ವಿಜಯ ಬಸವ ಅಜರನಿಗೆ ಹೇಳಿ ನಂಬರ್ ಪಡೆದುಕೊಂಡಿರುತ್ತಾನೆ. ಸ್ನೇಹಿತ ಹೇಳಿದ ಕೆಲಸ ಮಾಡಿಕೊಟ್ಟಿದ್ರೇ ಎಲ್ಲವೂ ಸರಿ ಇರುತ್ತಿತ್ತು. ಆದರೆ ವಿಜಯ ಬಸವ ಅಷ್ಟೇ ಮಾಡಿರಲಿಲ್ಲ. ಅಜರ್ ಪತ್ನಿಯ ನಂಬರ್ ಪೋರ್ಟ್ ಮಾಡುವುದರ ಜೊತೆಗೆ ಅವಳನ್ನು ತನ್ನಗೆ ಪೋರ್ಟ ಮಾಡಿಕೊಳ್ಳುವ ಪ್ರಯತ್ನದಲ್ಲಿರುತ್ತಾನೆ. ಅಂದರೆ ಅಜರನ ಪತ್ನಿಯ ಜೊತೆಗೆ ಕಾಲ್ ಮಾಡಿ ಮಾತಾಡಲು ಆರಂಭಿಸಿರುತ್ತಾನೆ. ಇದೂ ಅಜರ್‌ಗೆ ಇನ್ನಿಲ್ಲದ ಕೋಪ ತರಿಸುತ್ತದೆ. ಕೋಪದ ಕೈಗೆ ಬುದ್ದಿ ಕೊಟ್ಟ ಅಜರ್ ಕಳೆದ ಬುಧವಾರ ವಿಜಯ ಬಸವನನ್ನು ಪಾರ್ಟಿ ಮಾಡಲು ಕರೆದುಕೊಂಡು ಬಂದು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿ ಈಗ ಹಳೇ ಹುಬ್ಬಳ್ಳಿಯ ಪೊಲೀಸರ ಅಥಿತಿಯಾಗಿದ್ದಾನೆ.

ಜನೆವರಿ 30ರಂದು ಅರೆಬೆಂದ ಸ್ಥಿತಿಯಲ್ಲಿದ್ದ ವಿಜಯ ಬಸನ ಕೊಲೆ ಹುಬ್ಬಳ್ಳಿಗರನ್ನು ಬೆಚ್ಚಿ ಬೀಳಿಸಿತ್ತು‌. ಈಗ ಕೊಲೆಯ ಹಿಂದಿನ ಕಥೆಯನ್ನು ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಜರನನ್ನು ಹತ್ಯೆ ನಡೆದ ಎರಡೇ ದಿನಲ್ಲಿ ಬಂಧಿಸಿ ವಿಚಾರಣೆ ಪೂರ್ಣಗೊಳ್ಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ‌. ಮಗನ ಆ ಒಂದು ತಪ್ಪಿನಿಂದ ವಿಜಯ ಬಸವ ಕುಟುಂಬಸ್ಥರು ಈಗ ಮಗನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.‌

ಹತ್ಯೆಯಾದ ವಿಜಯ ಬಸವ ಹಾಗೂ ಅಜರ್ ಇಬ್ಬರು ಸ್ನೇಹತರಾಗಿದ್ಧರೂ ಕೂಡಾ ಇಬ್ಬರ ಜೀವನದಲ್ಲಿ ಮಾಡಿದುಣ್ಣೋ ಮಾಹಾರಾಯ ಎಂಬ‌ ಗಾದೆ ಅಕ್ಷರಶಃ ಅಪ್ಲೈ ಆಗುತ್ತಿದೆ. ಸ್ನೇಹಿತನ ಮಡದಿಯ ಸೀಮ್ ಪೋರ್ಟ ಮಾಡಿ ಸ್ನೇಹ ಉಳುಸಿಕೊಂಡಿದ್ದರೆ. ಇಂದು ವಿಜಯ ಬಸವ ನೆಮ್ಮದಿಯ ಉಸಿರು ಇರುತಿತ್ತು. ಆದರೆ ಸೀಮ್ ಜೊತೆಗೆ ಸ್ನೇಹಿತನ ಹೆಡತಿಯನ್ನು ಪೋರ್ಟ ಮಾಡೋ ಪ್ರಯತ್ನಕ್ಕೆ ಕೈ ಹಾಕಿ ಈಗ ವಿಜಯ ಬಸವ ಮಸಣಕ್ಕೆ ಹೋಗಿದ್ದು, ಕೋಪದ ಕೈಗೆ ಬುದ್ದಿ ಕೊಟ್ಟ ಅಜರ್ ಕಂಬಿ ಹಿಂದೆ ಹೋಗಿದ್ದಾನೆ.

ಮಂಜುನಾಥ ದ್ಯಾಮಕ್ಕನವರ ಫ್ರೀಢಂ ಟಿವಿ ಹುಬ್ಬಳ್ಳಿ………

By admin

Leave a Reply

Your email address will not be published. Required fields are marked *

Verified by MonsterInsights