ಬೆಂಗಳೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹಾಗೂ ಅಧಿಕಾರಿಗಳ ವಿದೇಶಿ ಪ್ರವಾಸಕ್ಕೆ ಕಳೆದ ಒಂದು ವರ್ಷದಲ್ಲಿ 20 ಕೋಟಿ ರೂ ವೆಚ್ಚವಾಗಿದೆ. ಅಮೆರಿಕಾ, ದಾವೋಸ್, ತೈವಾನ್, ಜಪಾನ್ ಹಾಗೂ ದಕ್ಷಿಣ ಕೊರಿಯಾ ದೇಶಗಳಿಗೆ ಕೈಗಾರಿಕೆ ಹೂಡಿಕೆ ಸೆಳೆಯುವ ನಿಟ್ಟಿನಲ್ಲಿ ಪ್ರವಾಸ ಕೈಗೊಂಡಿತ್ತು. 2023 ರಿಂದ ಈವರೆಗೆ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಸೆಳೆಯುವ ಉದ್ದೇಶದ ವಿದೇಶಿ ಪ್ರವಾಸಕ್ಕೆ 20 ಕೋಟಿ ಖರ್ಚಾಗಿದೆ. ದಾವೋಸ್ ಪ್ರವಾಸಕ್ಕೆ 14 ಕೋಟಿ,ತೈವಾನ್ ಪ್ರವಾಸಕ್ಕೆ 8 ಲಕ್ಷ ಖರ್ಚು,ಜಪಾನ್ ಮತ್ತು ದಕ್ಷಿಣ ಕೊರಿಯಾ ಪ್ರವಾಸ 1.29 ಕೋಟಿ ಖರ್ಚು,ಅಮೆರಿಕಾ ಪ್ರವಾಸಕ್ಕೆ 2.59 ಕೋಟಿ ವೆಚ್ಚ,ಅಮೆರಿಕಾ ಪ್ರವಾಸಕ್ಕೆ 2.15 ಕೋಟಿ ರೂ ವೆಚ್ಚ ಮಾಡಿದ್ದಾರೆ.
ಪ್ರವಾಸದಿಂದ ಹೂಡಿಕೆಯ ಭರವಸೆ ಸಿಕ್ಕಿದ್ದೆಷ್ಟು?
ಇನ್ನು 25 ಕೋಟಿ ಖರ್ಚು ಮಾಡಿ ವಿದೇಶಿ ಪ್ರವಾಸ ಮಾಡಿದ ಸಂದರ್ಭದಲ್ಲಿ ವಿವಿಧ ದೇಶಗಳಲ್ಲಿ ಕಂಪನಿಗಳಿಂದ ಹೂಡಿಕೆಯ ಭರವಸೆ ಸಿಕ್ಕಿದೆ. ಈ ಪೈಕಿ ಅಮೆರಿಕಾ ಪ್ರವಾಸದ ಸಂದರ್ಭದಲ್ಲಿ 25,000 ಕೋಟಿ ಹೂಡಿಕೆಯ ಭರವಸೆ ಸಿಕ್ಕಿದೆ. ಇದರಿಂದ 1450 ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ.
ಇನ್ನು ದಾವೋಸ್ ಪ್ರವಾಸದ ಸಂದರ್ಭದಲ್ಲಿ 15,000 ಕೋಟಿ ಹೂಡಿಕೆಯ ಭರವಸೆ ಸಿಕ್ಕಿದ್ದು, 20,000 ಉದ್ಯೋಗ ಸೃಷ್ಟಿಯಾಗುವ ಅವಕಾಶ ಇದೆ. ಇನ್ನು ತೈವಾನ್ ಪ್ರವಾಸದ ಸಂದರ್ಭದಲ್ಲಿ 1490 ಕೋಟಿ ಹೂಡಿಕೆ ಭರವಸೆ ಸಿಕ್ಕಿದ್ದು, 1070 ಉದ್ಯೋಗ ಸೃಷ್ಟಿಯ ಸಾಧ್ಯತೆ ಇದೆ.
ಒಟ್ಟು 64,675 ಕೋಟಿ ಹೂಡಿಕೆಯ ಭರವಸೆ ಸಿಕ್ಕಿದ್ದು, 22,520 ಉದ್ಯೋಗ ಸೃಷ್ಟಿ ಸಾಧ್ಯತೆ ಇದೆ. ಈ ಯೋಜನೆಗಳು ಬೃಹತ್ ಕೈಗಾರಿಕೆಗಳಾಗಿರುವುದರಿಂದ ಇದರ ಸ್ಥಾಪನೆಗೆ 3 ರಂದ 4 ವರ್ಷ ಕಾಲಾವಕಾಶದ ಅಗತ್ಯತೆ ಇದೆ ಎಂದು ಉತ್ತರ ನೀಡಲಾಗಿದೆ.