Wednesday, April 30, 2025
34.5 C
Bengaluru
LIVE
ಮನೆಕ್ರೈಂ ಸ್ಟೋರಿಅಪ್ಪನ ಹತ್ಯೆಗೆ ಸುಪಾರಿ ಎಂಥಾ ಕಾಲ ಬಂತಪ್ಪ..!

ಅಪ್ಪನ ಹತ್ಯೆಗೆ ಸುಪಾರಿ ಎಂಥಾ ಕಾಲ ಬಂತಪ್ಪ..!

ಬಾಗಲಕೋಟೆ : ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದ ವಾಸಿಗಳಾದ ತಂದೆ ಚೆನ್ನಪ್ಪ ಮತ್ತು ಮಗ ಚನ್ನಬಸಪ್ಪ ನಡುವೆ 37 ಎಕರೆ ಜಮೀನನ್ನು ಭಾಗ ಮಾಡುವ ವಿಚಾರಕ್ಕೆ ಪದೆ ಪದೆ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಚನ್ನಬಸಪ್ಪ, ಪತ್ನಿ ಶಿವಬಸವ್ವ ಮತ್ತು ಚನ್ನಬಸಪ್ಪನ ಆಪ್ತ ರಮೇಶ್ ಮನಗೂಳಿ ಒಟ್ಟಿಗೆ ಸೇರಿ ಕೊಲೆ ಮಾಡಲು ಯೋಚನೆ ರೂಪಿಸಿದ್ದರು. ಮುಂದೇನಾಯ್ತು ಈ ಸ್ಟೋರಿ ನೋಡಿ.

ಆಸ್ತಿಗಾಗಿ ಸುಪಾರಿ ಕೊಟ್ಟು ಅಪ್ಪನನ್ನೇ ಮಗ ಕೊಲೆ ಮಾಡಿಸಿದ್ದಾನೆ. ಚೆನ್ನಪ್ಪ ಕೊಲೆಯಾದ ತಂದೆ. ಚನ್ನಬಸಪ್ಪ ಕೊಲೆ ‌ಮಾಡಿಸಿದ‌ ಪಾಪಿ ಪುತ್ರ. ಮಾಂತೇಶ್ ಮರಡಿಮಠ ಕೊಲೆ ‌ಮಾಡಿದ ಆರೋಪಿ. ಚೆನ್ನಪ್ಪನ ಕುಟುಂಬ ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ವಾಸಿಸುತ್ತಿತ್ತು. 32 ಎಕರೆ ಜಮೀನನ್ನು ಭಾಗ ಮಾಡುವ ವಿಚಾರಕ್ಕೆ ತಂದೆ ಮತ್ತು ಮಗನ ನಡುವೆ ಪದೆ ಪದೆ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಚನ್ನಬಸಪ್ಪ, ಪತ್ನಿ ಶಿವಬಸವ್ವ ಮತ್ತು ಚನ್ನಬಸಪ್ಪನ ಆಪ್ತ ರಮೇಶ್ ಮನಗೂಳಿ ಒಟ್ಟಿಗೆ ಸೇರಿ ಕೊಲೆ ಮಾಡಲು ಯೋಚನೆ ರೂಪಿಸಿದ್ದರು.

ನಂತರ ವಿಜಯಪುರ ಜಿಲ್ಲೆಯ ನಿಡಗುಂದಿ ಮೂಲದ ‌ಮಾಂತೇಶ್ ಮರಡಿಮಠ ಎಂಬುವನಿಗೆ 3 ಲಕ್ಷ ರೂ. ನೀಡಿ ಚೆನ್ನಪ್ಪನನ್ನು ಕೊಲೆ ಮಾಡುವಂತೆ ಸುಫಾರಿ ನೀಡಿದ್ದಾರೆ. ಸುಫಾರಿ ಪಡೆದ ‌ಮಾಂತೇಶ್ ಮರಡಿಮಠ ಜನವರಿ 25ರ ರಾತ್ರಿ ರಾಂಪುರ‌ಗ್ರಾಮದ ಬಳಿ ಚೆನ್ನಪ್ಪನನ್ನು ಮಚ್ಚಿನಿಂದ ಕೊಚ್ಚಿ, ಕಲ್ಲಿನಿಂದ ತಲೆ ಜಜ್ಜಿ‌‌ಕೊಲೆ ಮಾಡಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತ್ತು ಪ್ರಕರಣ ದಾಖಲಿಸಿಕೊಂಡರು. ಪೊಲೀಸರ ತನಿಖೆ ನಡೆಸಿ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರಕರಣದ ಆರೋಪಿಗಳಾದ ಮಗ ಚನ್ನಬಸಪ್ಪ, ಸೊಸೆ ಶಿವಬಸವ್ವ ಸೇರಿದಂತೆ ನಾಲ್ವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments