#Exclusive NewsTop Newsಮನರಂಜನೆಸಿನಿಮಾಸುದ್ದಿ

ಮ್ಯಾಕ್ಸ್’ ಸಿನಿಮಾ ಬಂದ ಮೇಲೆ ‘ಯುಐ‘ ಚಿತ್ರದ ಕಲೆಕ್ಷನ್ ಹೇಗಿದೆ…?

ವರ್ಷಾಂತ್ಯಕ್ಕೆ ಸಿನಿಪ್ರಿಯರಿಗೆ ಭರ್ಜರಿ ಹಬ್ಬದೂಟ ಸಿಕ್ಕಿದೆ. ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಬಿಗ್ ಸಿನಿಮಾಗಳು ರಿಲೀಸ್ ಆಗಿದ್ದು, ಗಮನ ಸೆಳೆದಿದೆ. ಯಾವ ಸಿನಿಮಾ ನೋಡಬೇಕು ಎನ್ನುವ ಗೊಂದಲ ಸಿನಿಪ್ರಿಯರಿಗೆ ಮೂಡಿದೆ. ಈ ಮಧ್ಯೆ ಎರಡೂ ಚಿತ್ರಗಳ ಗಳಿಕೆ ಯಾವ ರೀತಿಯಲ್ಲಿ ಇದೆ? ಯಾವ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದೆ? ಆ ಬಗ್ಗೆ ಇಲ್ಲಿದೆ ಮಾಹಿತಿ.

ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ರಂದು ತೆರೆಗೆ ಬಂತು. ಈ ಚಿತ್ರ ಮಾಸ್ ಆ್ಯಕ್ಷನ್ ಶೈಲಿಯಲ್ಲಿ ಮೂಡಿ ಬಂತು. ಈ ಕಾರಣಕ್ಕೆ ‘ಯುಐ’ ಚಿತ್ರದ ಕಲೆಕ್ಷನ್ ಕೊಂಚ ತಗ್ಗಿದೆ.

ಸುದೀಪ್ ಹಾಗೂ ಉಪೇಂದ್ರ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಸುದೀಪ್ ಅವರು ಉಪೇಂದ್ರ ಅವರ ಅಭಿಮಾನಿ ಕೂಡ ಹೌದು. ಆದಾಗ್ಯೂ ಎರಡೂ ಸಿನಿಮಾಗಳು ಒಟ್ಟಿಗೆ ತೆರೆಗೆ ಬಂದಿದ್ದು ಏಕೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಇದಕ್ಕೆ ಕಾರಣವೂ ಇದೆ ಎಂದು ಹೇಳಲಾಗುತ್ತಿದೆ. ‘ಮ್ಯಾಕ್ಸ್’ ಸಿನಿಮಾಗೆ ತಮಿಳಿನ ನಿರ್ಮಾಪಕರು. ಈ ಕಾರಣಕ್ಕೆ ರಿಲೀಸ್ ಕೂಡ ಅವರದ್ದೇ ನಿರ್ಧಾರ ಎನ್ನಲಾಗಿದೆ.

Comments (0)

Your email address will not be published. Required fields are marked *

Back to top button