ರಾಜ್ಯಸುದ್ದಿ

ಮನೆಕೆಲಸದಾಕೆ ನಾಯಿ ಮರಿಯನ್ನು ಎತ್ತಿ ನೆಲಕ್ಕೆ ಬಡಿದು ಕೊಲೆ

ಬೆಂಗಳೂರು: ನಾಯಿಮರಿಯನ್ನು ಮನೆಕೆಲಸದಾಕೆಯೊಬ್ಬಳು ಲಿಫ್ಟ್​​ ನಲ್ಲಿ ನಾಯಿಯನ್ನು ಎತ್ತಿ ನೆಲಕ್ಕೆ ಜೋರಾಗಿ ಬಡಿದು ಸಾಯಿಸಿರುವ ಘಟನೆ ಬಾಗಲೂರಿನ ಅಪಾರ್ಟ್​​​ ಮೆಂಟ್​​ವೊಂದರಲ್ಲಿ ನಡೆದಿದೆ..

ಅಕ್ಟೋಬರ್ 31ರಂದು ಘಟನೆ ನಡೆದಿದ್ದು, ಲಿಫ್ಟ್‌ನ ಸಿಸಿ ಕ್ಯಾಮೆರಾದಲ್ಲಿ ಮಹಿಳೆಯ ಅಮಾನವೀಯ ಕೃತ್ಯ ಸೆರೆಯಾಗಿದೆ. ಪುಷ್ಪಲತಾ ಎಂಬ ಮಹಿಳೆ ಈ ಕೃತ್ಯವೆಸಗಿದ್ದಾಳೆ. ಪುಟ್ಟ ನಾಯಿಮರಿಯನ್ನು ನೋಡಿಕೊಳ್ಳುವುದಕ್ಕೆಂದೇ ಕೆಲಸಕ್ಕಿದ್ದ ಮಹಿಳೆ ಅಮಾನವೀಯ ಕೃತ್ಯ ಎಸಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಸಿಟಿವಿ ದೃಶ್ಯ ವೈರಲ್ಆಗಿದ್ದು, ಮಹಿಳೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ..

ಎಂಬಿಎ ವಿದ್ಯಾರ್ಥಿನಿಯಾಗಿರುವ ರಾಶಿ ಪೂಜಾರಿ ಎಂಬವರು 4 ವರ್ಷದ ಹಿಂದೆ ಚಿಹೋವಾ ತಳಿಯ ಪುಟ್ಟ ಶ್ವಾನವನ್ನು ತಂದಿದ್ದು, ಸಾಕಿದ್ದರು. ನಾಯಿ ನೋಡಿಕೊಳ್ಳಲೆಂದೇ ಪುಷ್ಪಾಲತಾಳನ್ನು ನೇಮಿಸಲಾಗಿತ್ತು. ಆದರೆ ಪುಷ್ಪಲತಾ ನಾಯಿಯನ್ನು ಸಾಯಿಸಿ, ಬಳಿಕ ಲಿಫ್ಟ್ ಇಂದ ಹೊರಗೆ ಹೋಗಿ ಬಿತ್ತು ಎಂದು ಪುಷ್ಪಾಲತಾ ಕಥೆ ಕಟ್ಟಿದ್ದಳು. ಈ ಬಗ್ಗೆ ಶ್ವಾನದ ಮಾಲಕಿ ಸೆಕ್ಯೂರಿಟಿ ಬಳಿ ವಿಚಾರಿಸಿದಾಗ ಮಾಹಿತಿ ದೊರಕಿದೆ. ಅನುಮಾನ ಬಂದು ಸಿಸಿಟಿವಿ ಪರಿಶೀಲನೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಪುಷ್ಪಲತಾ ವಿರುದ್ಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Comments (0)

Your email address will not be published. Required fields are marked *

Back to top button