ಹೊಸದುರ್ಗ : ಹೊಸದುರ್ಗದ ಬಾಗೂರಿನ ಚನ್ನಕೇಶವ ದೇವಸ್ಥಾನದೊಳಗೆ ನಾನು ಹೋಗಿದ್ದಕ್ಕೆ ತೊಳೆದಿದ್ದರು ಎಂದು ಕನಕ ಧಾಮದ ಈಶ್ವರನಂದಪುರಿ ಸ್ವಾಮೀಜಿ ಹೇಳಿದರು.ಅವರು ಹೊಸದುರ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಮಾತಾಡಿದರು.
ಅಂದು ನನಗೇನಾದರೂ ಅದು ಮುಜಾರಾಯಿ ದೇವಸ್ಥಾನ ಎಂದು ತಿಳಿದಿದ್ದರೆ, ಅಂದು ಉಡುಪಿಯಲ್ಲಿ ಕನಕದಾಸರು ಪ್ರತಿಭಟನೆ ಮಾಡಿದ ರೀತಿಯಲ್ಲಿ ನಾನು ಪ್ರತಿಭಟನೆ ಮಾಡುತ್ತಿದ್ದೆ ಆದರೆ ನನಗೆ ಗೊತ್ತಿರಲಿಲ್ಲ. ಕುರುಬ ಸ್ವಾಮೀಜಿ ಒಳಗೆ ಹೋದರು ಎಂದು ತೊಳೆದಿದ್ದರು. ಎಷ್ಟು ದಿನಗಳಾಗಿತ್ತೋ ಏನೋ ನಾನು ಹೋಗಿದ್ದಕ್ಕೆ ದೇವಸ್ಥಾನ ತೊಳೆದಿದ್ದಾರೆ ಎಂದು ಅಂದುಕೊಂಡು ಸುಮ್ಮನಾದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಆದರೆ ಅಂದು ನಾವು ಹೇಳಿದ್ದು, ದೇವಸ್ಥಾನ ಸ್ವಚ್ಚ ಮಾಡೊದಲ್ಲ,ಮನಸ್ಸಿನ ಮಲಿನ ಸ್ವಚ್ಛ ಮಾಡಿಕೊಳ್ಳಿ ಎಂದು ಹೇಳಿದ್ದೆವು.
ಇನ್ನೊಂದು ಕಡೆ ನಾನು ಮತ್ತು ಶಾಂತವೀರ ಶ್ರೀಗಳು ವೈಕುಂಠ ಏಕಾದಶಿದಿನ ವೆಂಕಟೇಶ್ವರ ಸ್ವಾಮಿದೇವಸ್ಥಾನಕ್ಕೆ ಹೋಗಿದ್ದು, ಅಲ್ಲಿ ನಮಗೆ ಹೊರಗೆ ನಿಲ್ಲಿಸಿ ಅರ್ಚಕರು ನರಕವನ್ನು ತೋರಿಸಿದರು. ಮಹಿಳೆಯರು ಒಳಗೆ ಹೋದರು, ಆದರೆ ನಮ್ಮನ್ನು ಬಿಡಲಿಲ್ಲ,ಒಂದೊಂದುಬಮಠದ ಸ್ವಾಮೀಜಿಗಳಾದ ನಮಗೆ ಪ್ರವೇಶವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾ, ಮುಂದಿನ ವರ್ಷ ಚನ್ನಕೇಶವ ದೇವಸ್ಥಾನಕ್ಕೆ ಹೋಗುವುದೇ ಇಲ್ಲ ಎಂದು ಹೇಳಿದರು.