Tuesday, February 24, 2026
20.8 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಬೆಂಗಳೂರಿನಲ್ಲಿ ಹನಿಟ್ರ್ಯಾಪ್ ವರ್ಸಸ್ ಗ್ಯಾಂಗ್‌ರೇಪ್; ದೂರು-ಪ್ರತಿದೂರುಗಳ ನಡುವೆ ಹೈಡ್ರಾಮಾ!

ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ವರ್ಸಸ್ ಗ್ಯಾಂಗ್‌ರೇಪ್; ದೂರು-ಪ್ರತಿದೂರುಗಳ ನಡುವೆ ಹೈಡ್ರಾಮಾ!

ಬೆಂಗಳೂರು: ಹನಿಟ್ರ್ಯಾಪ್ ಮತ್ತು ಗ್ಯಾಂಗ್‌ರೇಪ್ ಆರೋಪ-ಪ್ರತ್ಯಾರೋಪಗಳ ನಿಗೂಢ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಭಾರಿ ಸಂಚಲನ ಮೂಡಿಸಿದೆ. ಮಲ್ಲೇಶ್ವರಂ ಠಾಣೆಯಲ್ಲಿ ತನ್ನ ವಿರುದ್ಧ ಹನಿಟ್ರ್ಯಾಪ್ ದೂರು ದಾಖಲಾದ ಬೆನ್ನಲ್ಲೇ, ಯುವತಿಯು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ನಿಖಿಲ್ ಮತ್ತು ಡಿಕ್ಸನ್ ಸಾಂಡ್ರಾ ಎಂಬುವವರ ವಿರುದ್ಧ ಸಾಮೂಹಿಕ ಅತ್ಯಾಚಾರದ ಗಂಭೀರ ದೂರು ನೀಡಿದ್ದಾಳೆ.

ಫೆಬ್ರವರಿ 14ರಂದು ಜಕ್ಕೂರಿನ ವಿಲ್ಲಾವೊಂದರಲ್ಲಿ ನಡೆದ ಪಾರ್ಟಿಯಲ್ಲಿ ಆರೋಪಿಗಳು ತನಗೆ ಬಲವಂತವಾಗಿ ಮಾದಕ ದ್ರವ್ಯ ನೀಡಿ ಪ್ರಜ್ಞೆ ತಪ್ಪಿಸಿ, ಬಳಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾಳೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಾಗ ಖಾಸಗಿ ವಾಹಿನಿಯ ಹೆಸರಿನಲ್ಲಿ ತನಗೆ ಹಣಕ್ಕಾಗಿ ಬೇಡಿಕೆ ಇಟ್ಟು ಬ್ಲಾಕ್‌ಮೇಲ್ ಮಾಡಲಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಒಂದು ದಿನ ಮುಂಚಿತವಾಗಿ ನಿಖಿಲ್ ಎಂಬುವವರು ಈ ಯುವತಿಯ ವಿರುದ್ಧ ಹನಿಟ್ರ್ಯಾಪ್ ದೂರು ನೀಡಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಸದ್ಯ ಪೊಲೀಸರು ಎರಡು ದೂರುಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದು, ಇದು ನಿಜವಾದ ದೌರ್ಜನ್ಯವೇ ಅಥವಾ ಹನಿಟ್ರ್ಯಾಪ್ ಕೇಸ್‌ನಿಂದ ತಪ್ಪಿಸಿಕೊಳ್ಳಲು ಮಾಡಲಾದ ತಂತ್ರವೇ ಎಂಬ ಸತ್ಯಾಂಶ ಹೊರಬರಬೇಕಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments