Thursday, November 20, 2025
21.7 C
Bengaluru
Google search engine
LIVE
ಮನೆ#Exclusive NewsTop Newsಕಲಬುರಗಿಯಲ್ಲಿ ಮತ್ತೊಂದು ಹನಿಟ್ರ್ಯಾಪ್: ವ್ಯಾಪಾರಿಯಿಂದ 35 ಲಕ್ಚ ರೂ. ಸುಲಿಗೆ

ಕಲಬುರಗಿಯಲ್ಲಿ ಮತ್ತೊಂದು ಹನಿಟ್ರ್ಯಾಪ್: ವ್ಯಾಪಾರಿಯಿಂದ 35 ಲಕ್ಚ ರೂ. ಸುಲಿಗೆ

ಕಲಬುರಗಿ: ಕಲಬುರಗಿಯಲ್ಲಿ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಬೆಂಗಾಲ್ ಸ್ಟೋರ್ಸ್ ವ್ಯಾಪಾರಿಯೊಬ್ಬರನ್ನು ಹನಿಟ್ರ್ಯಾಪ್​ ಜಾಲಕ್ಕೆ ಸಿಲುಕಿಸಿ 34.25 ರೂ. ಲಕ್ಷ ದೋಚಿರುವ ಆರೋಪ ಕೇಳಿ ಬಂದಿದ್ದು, ಮಹಾರಾಷ್ಟ್ರ ಮೂಲದ ಯುವತಿ ಸೇರಿ ಒಂಬತ್ತು ಮಂದಿ ವಿರುದ್ಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲು. ಈ ಪ್ರಕರಣದಲ್ಲೂ ಪ್ರಭು ಹಿರೇಮಠ, ರಾಜು ಲೇಂಗಟಿ ಪ್ರಮುಖ ಆರೋಪಿಗಳಾಗಿದ್ದಾರೆ.

ಉದ್ಯಮಿ ವಿನೋದಕುಮಾರ ಖೇಣಿ ವ್ಯಾಪಾರಿಯಾಗಿದ್ದು, ಇವರ ಅಂಗಡಿಗೆ ಆರೋಪಿ ಪ್ರಭು ಹಿರೇಮಠ ಖಾಯಂ ಬರುತ್ತಿದ್ದನು. ಆರೋಪಿ ಪ್ರಭು ಹಿರೇಮಠ ಖಾಯಂ ಗ್ರಾಹಕನಾಗಿದ್ದರಿಂದ ಉದ್ಯಮಿ ವಿನೋದಕಮಾರ್​ ಆತನ ಜೊತೆ ಗೆಳತನ ಬೆಳಸಿದ್ದರು. ಈ ನಡುವೆ, ಇದೇ ವರ್ಷ ಮೇನಲ್ಲಿ ಮಹಾರಾಷ್ಟ್ರ ಮೂಲದ ಪೂಜಾ ಎಂಬುವ ಯುವತಿಯಿಂದ ವಿನೋದಕುಮಾರ್ ಅವರಿಗೆ ಮೆಸೆಜ್​ ಬಂದಿದೆ. ಆದರೆ, ಈ ಮೆಸೆಜ್​ಗಳಿಗೆ ವಿನೋದಕುಮಾರ್​ ರಿಪ್ಲೈ ಮಾಡಿಲ್ಲ.

ಒಂದು ಮಧ್ಯರಾತ್ರಿ ಪೂಜಾ, ವಿನೋದಕುಮಾರ್ ಅವರಿಗೆ ವಾಟ್ಸ್​ಆ್ಯಪ್​ ಕಾಲ್​ ಮಾಡಿದ್ದಾಳೆ. ಆಗ, ವಿನೋದಕುಮಾರ್​ ಕಾಲ್​ ರಿಸಿವ್​​ ಮಾಡಿ ಮಾತನಾಡಿದ್ದಾರೆ. ನಂತರ, ಇಬ್ಬರು ಪರಿಚಯಸ್ತರಾಗಿದ್ದು, ಸಾಮಾನ್ಯ ಕರೆಗಳನ್ನು ಮಾಡಿ ಮಾತನಾಡಲು ಆರಂಭಿಸಿದ್ದಾರೆ.

ಮೇ 05 ರಂದು ವಿನೋದಕುಮಾರ್​ ವ್ಯಾಪಾರದ ನಿಮಿತ್ಯ ಹೈದ್ರಾಬಾದಗೆ ಹೋಗಿದ್ದಾರೆ. ಹೈದರಾಬಾದ್​ಗೆ ಹೋಗುವ ವಿಚಾರವನ್ನು ಹಿಂದಿನ ದಿನವೇ ಪೂಜಾಗೆ ವಿನೋದಕುಮಾರ್​ ತಿಳಿಸಿದ್ದಾರೆ. ಇದನ್ನು ತಿಳಿದ ಪೂಜಾ ಕೂಡ ಹೈದರಾಬಾದ್​ಗೆ ಹೋಗಿದ್ದಾಳೆ. ಅಲ್ಲಿ ವಿನೋದಕುಮಾರ್ ಅವರಿಗೆ ಪೂಜಾ ಕರೆ ಮಾಡಿ “ನಾನು ಕೆಲಸದ ನಿಮಿತ್ತ ಹೈದ್ರಾಬಾದ್​ಗೆ ಬಂದಿದ್ದೇ, ರಾಣಿಗುಂಜನಲ್ಲಿ ಇದ್ದೇನೆ. ಭೇಟಿಯಾಗುತ್ತೇನೆ” ಎಂದು ಹೇಳಿದ್ದಾಳೆ.

ವಿನೋದಕುಮಾರ್​ ರಾಣಿಗುಂಜನಲ್ಲಿ ಪೂಜಾಳನ್ನು ಭೇಟಿಯಾಗಿದ್ದಾರೆ. ಬಳಿಕ ಇಬ್ಬರು ಒಟ್ಟಿಗೆ ರಾಣಿಗಂಜನಿಂದ ಹೈದ್ರಾಬಾದನಲ್ಲಿನ ಟೌನ ಹೌಸ್ ಲಾಡ್ಲಿಗೆ ಹೋಗಿದ್ದಾರೆ. ಈ ವೇಳೆ ವಿನೋದಕುಮಾರ್ ನನ್ನ ನಂಬರ್ ನಿನಗೆ ಹೇಗೆ ಸಿಕ್ತು ಎಂದು ಪೂಜಾಗೆ ಕೇಳಿದ್ದಾರೆ. ಆಗ, ಪೂಜಾ ಪ್ರಭು ಹಿರೇಮಠ ನನ್ನ ಸಂಬಂಧಿ, ಅವರು ನಿಮ್ಮ ನಂಬರ್​ ಕೊಟ್ಟರು ಎಂದು ಹೇಳಿದ್ದಾಳೆ. ಬಳಿಕ, ಪೂಜಾ ರೂಮಿನಲ್ಲಿ ಮತ್ತು ಕಾರಿಡಾರನಲ್ಲಿ ವಿನೋದಕುಮಾರ್ ಅವರನ್ನು ತಬ್ಬಿಕೊಂಡು, ಮುತ್ತು ಕೊಟ್ಟು, ತನ್ನ ಮೊಬೈಲನಲ್ಲಿ ಫೋಟೋ ತೆಗೆದುಕೊಂಡಿದ್ದಾಳೆ.

ಪೂಜಾ ಮತ್ತು ವಿನೋದಕುಮಾರ್ ಮತ್ತೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇಬ್ಬರು ಓರಿಯನ್ ಮಾಲ್ ಎದರುಗಡೆ ಕಟ್ಟಿ ಮೇಲೆ ಮಾತಾಡುತ್ತಾ ಕುಳಿತಾಗ, ಅಲ್ಲಿಯೂ ಕೂಡ ಪೂಜಾ ವಿನೋದಕುಮಾರ್ ಪಕ್ಕದಲ್ಲಿ ಕುಳಿತುಕೊಂಡು ತನ್ನ ಮೊಬೈಲನಲ್ಲಿ ಫೋಟೊಗಳನ್ನು ತೆಗೆದುಕೊಂಡಿದ್ದಾಳೆ. ನಂತರ ಈ ಫೋಟೊಗಳನ್ನು ಪೂಜಾ ಆರೋಪಿಗಳಾದ ಪ್ರಭು ಹಿರೇಮಠ ಮತ್ತು ರಾಜು ಲೇಂಗಟಿಗೆ ಕಳುಹಿಸಿದ್ದಾಳೆ.

ಬಳಿಕ, ವಿನೋದಕುಮಾರ್ ಮರಳಿ ಊರಿಗೆ ಬಂದಾಗ ಆರೋಪಿ ಪ್ರಭು ಹಿರೇಮಠ ಈ ಫೋಟೋಗಳನ್ನು ತೋರಿಸಿ ಬ್ಲಾಕ್​ ಮೇಲ್​ ಮಾಡಿ, ಬೆದರಿಕೆ ಹಾಕಿ ನಗದು, ಚೆಕ್ ಮತ್ತು ಫೋನ್ ಪೇ ಮೂಲಕ 34 ಲಕ್ಷ ರೂ. ದೂಚಿದ್ದಾರೆ ಎಂದು ಎಫ್​ಐಆರ್​ನಲ್ಲಿ ದಾಖಲಾಗಿದೆ. ಉದ್ಯಮಿ ವಿನೋದಕುಮಾರ್ ಖೇಣಿ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments