ಹಾಸನ: ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಗಡ್ಡ ಬೋಳಿಸುವಂತೆ ಕಾಲೇಜು ಮಂಡಳಿ ತಾಕೀತು ಮಾಡಿದ್ದಾರೆ ಎಂಬ ಆರೋಪ ಕೇಳಿ ಹಾಸನದಲ್ಲಿ ಕೇಳಿ ಬಂದಿದೆ.

ಹಾಸನ ಜಿಲ್ಲೆ, ಹೊಳೆನರಸೀಪುರ ಪಟ್ಟಣದ ನರ್ಸಿಂಗ್ ಕಾಲೇಜಿನಲ್ಲಿ ಜಮು-ಕಾಶ್ಮೀರದ ಹದಿಮೂರು ವಿದ್ಯಾರ್ಥಿಗಳು ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಾಲೇಜಿಗೆ ಗಡ್ಡ ಬಿಟ್ಟುಕೊಂಡು ಬರುತ್ತಿರುವುದಲ್ಲದೇ ಕಾಲೇಜಿನ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದರಿಂದ ಕಾಲೇಜಿನ ಆಡಳಿತ ಮಂಡಳಿ ಗಡ್ಡ ಬೋಳಿಸಿಕೊಂಡು ಬಂದು ಶಿಸ್ತಿನಿಂದ ವರ್ತಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಗಡ್ಡ ಬೋಳಿಸಲು ಮುಸ್ಲಿಂ ಸಮುದಾಯದ ಯುವಕರು ನಿರಾಕರಿಸಿದ್ದು, ತಮ್ಮ ಸಂಪ್ರದಾಯದಂತೆ ನಾವು ಗಡ್ಡ ಬಿಡುವುದಾಗಿ ಪಟ್ಟು ಹಿಡಿದಿದ್ದಾರೆ. ಈ ವಿಚಾರ ಸಂಬಂಧ ಜಮ್ಮು-ಕಾಶ್ಮೀರ ಸ್ಟೂಡೆಂಟ್ಸ್ ಅಸೋಸಿಯೇಷನ್‌ಗೆ ಮೊರೆ ಹೋಗಿದ್ದಾರೆ. ಪಿಎಂಎಸ್‌ಎಸ್ ಯೋಜನೆಯಡಿ ಜಮ್ಮು-ಕಾಶ್ಮೀರದಿಂದ ಹೊಳೆನರಸೀಪುರಕ್ಕೆ ವ್ಯಾಸಂಗಕ್ಕಾಗಿ ಬಂದಿರುವ ಯುವಕರು ಕಾಲೇಜು ಪ್ರಾಂಶುಪಾಲರ ಮೌಖಿಕ ಆದೇಶಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಗಡ್ಡ ಬೋಳಿಸಿಕೊಂಡು ಕಾಲೇಜು ಚಟುವಟಿಕೆಗಳಲ್ಲಿ ಭಾಗವಹಿಸಲು ಸೂಚಿಸಲಾಗಿದೆ. ನಮ್ಮ ಸಂಪ್ರದಾಯದಂತೆ ಗಡ್ಡ ಬಿಡುವುದು ನಮ್ಮ ಹಕ್ಕು. ಈ ಕ್ರಮ ನಮ್ಮ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ. ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಯವಂತೆ ಒತ್ತಾಯಿಸಿ ಎಕ್ಸ್ನಲ್ಲೂ ವಿದ್ಯಾರ್ಥಿಗಳು ಪೋಸ್ಟ್ ಮಾಡಿದ್ದಾರೆ. ಪ್ರಕರಣ ಬೇರೆ ಹಂತಕ್ಕೆ ಹೋಗಬಾರದೆಂದು ಎಚ್ಚೆತ್ತ ಪ್ರಾಂಶುಪಾಲರು ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ವಿವಾದ ಬಗೆಹರಿಸಲಾಗಿದೆ ಎಂದು ಸಂಧಾನ ಮಾತುಕತೆಯಲ್ಲಿ ತಿಳಿಸಿದ್ದಾರೆ.

ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ಉಮರ್ ಮಾತನಾಡಿ, ನಮಗೆ ಗಡ್ಡ ತೆಗೆಯುವಂತೆ ಪ್ರಾಂಶುಪಾಲರು ಸೂಚಿಸಿದರು. ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಚನ್ನಬಸವನಗೌಡ ಹಾಗೂ ಗಿರೀಶ್ ಮಾತನಾಡಿ, ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು ಎಲ್ಲ ವಿದ್ಯಾರ್ಥಿಗಳಿಗೆ ಸೂಚನೆ ಕೊಟ್ಟಿದ್ದರು. ಗಡ್ಡವನ್ನು ಟ್ರಿಂ ಮಾಡಿಕೊಂಡು ಬನ್ನಿ ಎಂದು ಹೇಳಿದ್ದರು. ನರ್ಸಿಂಗ್ ಕಾಲೇಜಿನಲ್ಲಿ ಕೆಲವು ನಿಯಮಾವಳಿಗಳಿವೆ. ಅವುಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದರು.

ನೀವು ನರ್ಸಿಂಗ್ ವಿದ್ಯಾರ್ಥಿಗಳು ರೋಗಿಗಳ ಶುಶ್ರೂಷೆ ಮಾಡಬೇಕು. ರೋಗಿಗಳ ಬಳಿ ಹೋಗಬೇಕು ಅವರು ನಿಮ್ಮನ್ನು ನೋಡಿದ ಕೂಡಲೆ ಇವರು ಚಿಕಿತ್ಸೆ ಕೊಡುತ್ತಾರೆ ಎನ್ನುವ ಭಾವನೆ ಬರಬೇಕು. ಹೀಗಾಗಿ ಎಲ್ಲರೂ ಗಡ್ಡ ಟ್ರಿಂ ಮಾಡಿಕೊಂಡು ಶಿಸ್ತಾಗಿ ಬನ್ನಿ ಎಂದಿದ್ದರು. ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ರೀತಿ ಸೂಚನೆ ಕೊಟ್ಟಿದ್ದರು. ಅದನ್ನು ಕೆಲವರು ತಪ್ಪಾಗಿ ಕೆಲವರು ಅರ್ಥೈಸಿಕೊಂಡಿದ್ದು ಸಮಸ್ಯೆ ಆಗಿದೆ. ನಾವು ಶಿಸ್ತು ಬರಬೇಕು, ಕಾಲೇಜಿನ ನಿಯಮಾವಳಿಗಳನ್ನು ಪಾಲಿಸಬೇಕಿರುವುದು ನಮ್ಮ ಕರ್ತವ್ಯ ಎಂದರು.

By Veeresh

Leave a Reply

Your email address will not be published. Required fields are marked *

Verified by MonsterInsights