ಧಾರವಾಡ: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಚಾಲಕನಿಗೆ ಆ್ಯಕ್ಸಿಡೆಂಟ್ ಮಾಡಿ ಪರಾರಿಯಾಗುತ್ತಿದ್ದ ಲಾರಿಯನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ವಶಕ್ಕೆ ಪಡೆಯುವಲ್ಲಿ ಧಾರವಾಡ ಸಂಚಾರಿ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ.
ಕೇರಳ ಮೂಲದ ನೊಂದಣಿ ಹೊಂದಿರುವ ಲಾರಿಯು ಧಾರವಾಡ ಹೊರವಲಯ ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಳಗಾವಿ ಕಡೆಗೆ ಸಾಗುತ್ತಿದ್ದ ವೇಳೆ, ಧಾರವಾಡದ ಹೊಯ್ಸಳ ನಗರದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರನಿಗೆ ಹಿಟ್ ಆ್ಯಂಡ ರನ್ ಮಾಡಿ ಪರಾರಿಯಾಗಲು ಮುಂದಾಗಿತ್ತು. ಹಿಟ್ ಆ್ಯಂಡ್ ರನ್ ನಿಂದಾಗಿ ಧಾರವಾಡದ ಕುಮಾರಸ್ವಾಮಿ ನಗರ ಸುಭಾಷ್‌ಚಂದ್ರ ಕೋರೆ ಸ್ಥಳದಲ್ಲಿಯೇ ಸಾವನಪ್ಪಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ಕ್ಯೂಕಾಗಿ ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಪೊಲೀಸರು ಮೃತ ಬೈಕ್ ಸವಾರನ ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ, ಲಾರಿಯನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ತೆಗೂರು ಬಳಿ ವಶಕ್ಕೆ ಪಡೆದ ಠಾಣೆಗೆ ಕರೆತಂದು ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಕುರಿತು ಧಾರವಾಡ ಸಂಚಾರಿ ಪೊಲೀಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.