Friday, November 21, 2025
20 C
Bengaluru
Google search engine
LIVE
ಮನೆ#Exclusive NewsTop Newsಹಗ್ಗದಿಂದ ಕಟ್ಟಿ ಹಾಕಿ ಲಾಠಿ ಪುಡಿಯಾಗುವರೆಗೂ ಹಲ್ಲೆ ಮಾಡಿದ: ಫೋಟೋ ವೈರಲ್

ಹಗ್ಗದಿಂದ ಕಟ್ಟಿ ಹಾಕಿ ಲಾಠಿ ಪುಡಿಯಾಗುವರೆಗೂ ಹಲ್ಲೆ ಮಾಡಿದ: ಫೋಟೋ ವೈರಲ್

ರೇಣುಕಾಸ್ವಾಮಿ ಕೇಸ್‌ನಲ್ಲಿ ನಡೆದ ಕ್ರೌರ್ಯಕ್ಕೆ ಮತ್ತಷ್ಟು ಫೋಟೋಗಳು ಸಾಕ್ಷಿಯಾಗಿವೆ. ಒಂದೊಂದು ಫೋಟೋಗಳು ಬೇರೆ ಬೇರೆಯ ಕಥೆಗಳನ್ನೇ ಹೇಳುತ್ತಿವೆ. ಒಂದು ಫೋಟೋದಲ್ಲಿ ರೇಣುಕಾಸ್ವಾಮಿ ಶರ್ಟ್ ಬಿಚ್ಚಿಸಿ ಹಿಂಸೆ ಕೊಟ್ಟಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳನ್ನು ಕಾಮಾಕ್ಷಿಪಾಳ್ಯದ ಪೊಲೀಸರು ಬಂಧಿಸಿದ್ದರು. ಇಂದು ಕೊಲೆ ಪ್ರಕರಣದಲ್ಲಿ ಕಾಮಾಕ್ಷಿಪಾಳ್ಯದ ಪೊಲೀಸರು ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಆದರೆ ರೇಣುಕಸ್ವಾಮಿ ಕೊಲೆಗೂ ಮುನ್ನ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಲಾಗಿತ್ತು. ಸದ್ಯ ಚಾರ್ಜ್ ಶೀಟ್​ನಲ್ಲಿ ipc 302ಕೊಲೆಗೆ ಸೇರದಂತೆ 363 ಕಿಡ್ನಾಪ್ ಆರೋಪದಲ್ಲೂ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಕಿಡ್ನಾಪ್ ಸೆಕ್ಷನ್​ನಲ್ಲೂ ಪವಿತ್ರ ಗೌಡ ಮತ್ತು ದರ್ಶನ್ ಸೇರಿದಂತೆ 9 ಆರೋಪಿಗಳ ವಿರುದ್ಧ ಕೊಲೆ ಮತ್ತು ಕಿಡ್ನಾಪ್ ಸೆಕ್ಷನ್ ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಉಳಿದಂತೆ 8 ಆರೋಪಿಗಳ ಮೇಲೆ ಕೊಲೆ ಪ್ರಕರಣ ಸೆಕ್ಷನ್ ಅಡಿಯಲ್ಲಿ ಮಾತ್ರ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಯಾಕಂದ್ರೆ ಈ 8 ಆರೋಪಿಗಳು ಕೊಲೆ ಮತ್ತು ಕೊಲೆ ನಂತರದ ಅಪರಾಧದಲ್ಲಿ ಮಾತ್ರ ಭಾಗಿಯಾಗಿದ್ದರು. ಈ ಹಿನ್ನಲೆ 8 ಆರೋಪಿಗಳ ಮೇಲೆ ipc 302 ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

ಹಾಗಿದ್ದರೆ ಕೊಲೆ ಮತ್ತು ಕಿಡ್ನಾಪ್ ಕೇಸ್ ನಲ್ಲಿ ಪವಿತ್ರಾಗೌಡ, ದರ್ಶನ್ , ಪವನ್, ಪ್ರದೋಶ್, ವಿನಯ್, ರಾಘವೇಂದ್ರ, ಅನುಕುಮಾರ್, ಜಗದೀಶ, ರವಿ ಆರೋಪಿಗಳ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಇನ್ನೂ ಉಳಿದ ನಂದೀಶ, ಧನರಾಜ್, ನಾಗ, ಲಕ್ಷ್ಮಣ, ದೀಪಕ್, ಕಾರ್ತಿಕ್, ಕೇಶವಮೂರ್ತಿ, ನಿಕಿಲ್ ಇವರುಗಳ ಮೇಲೆ ಕೊಲೆ ಪ್ರಕರಣದಡಿ ಚಾರ್ಜ್ ಸಲ್ಲಿಕೆಯಾಗಿದೆ.

ದರ್ಶನ್ ಗ್ಯಾಂಗ್‌ ಹೊಡೆಯುವಾಗ ರೇಣುಕಾಸ್ವಾಮಿ ಮೈಮೇಲಿದ್ದ ಬಟ್ಟೆಯನ್ನು ಬಿಚ್ಚಿಸಲಾಗಿದೆ. ಆದರೆ ರೇಣುಕಾಸ್ವಾಮಿಯ ಮೃತದೇಹ ಸಿಕ್ಕಾಗ ದೇಹದ ಮೇಲೆ ಟೀ ಶರ್ಟ್‌ ಹಾಕಲಾಗಿದೆ. ರೇಣುಕಾಸ್ವಾಮಿ ಮೇಲಿನ ಕ್ರೌರ್ಯಕ್ಕೆ ಈ ಫೋಟೋಗಳೇ ಸಾಕ್ಷಿಯಾಗಿದೆ. ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಪುಡಿ, ಪುಡಿಯಾದ ಲಾಠಿ ಭೀಕರತೆಯನ್ನು ಬಿಚ್ಚಿಟ್ಟಿದೆ. ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ದರ್ಶನ್ ಗ್ಯಾಂಗ್‌ ಲಾಠಿ ಪುಡಿಯಾಗೋ ಹಾಗೆ ಹಲ್ಲೆ ಮಾಡಿದೆ.

ರೇಣುಕಾಸ್ವಾಮಿಯನ್ನು ಹಗ್ಗದಿಂದ ಕಟ್ಟಿ ಹಾಕಿ ಮರದ ಕೊಂಬೆಯಿಂದ ಹಲ್ಲೆ ಮಾಡಲಾಗಿದೆ. ಲಾಠಿ, ಹಗ್ಗ, ಕೊಂಬೆಯ ಫೋಟೋಗಳು ನ್ಯೂಸ್ ಫಸ್ಟ್‌ಗೆ ಲಭ್ಯವಾಗಿದೆ. ಶೆಡ್‌ಗೆ ಕರೆ ತಂದ ರೇಣುಕಾಸ್ವಾಮಿಗೆ ಮೆಗ್ಗರ್​ನಿಂದ ಕರೆಂಟ್ ಶಾಕ್ ನೀಡಲಾಗಿದೆ. ಮೆಗ್ಗಾರ್‌ನ ಫೋಟೋ ಕೂಡ ನ್ಯೂಸ್‌ ಫಸ್ಟ್‌ಗೆ ಲಭ್ಯವಾಗಿದೆ. ಇದರ ಜೊತೆಗೆ ‘ಡಿ’​ ಗ್ಯಾಂಗ್​ನಿಂದ ರೇಣುಕಾಸ್ವಾಮಿ ತಲೆಗೆ ಭೀಕರವಾಗಿ ಹಲ್ಲೆ ಮಾಡಲಾಗಿದೆ. ತಲೆಯಿಂದ ರಕ್ತ ಸುರಿಯುವಾಗ ಆರೋಪಿಗಳು ಅರಿಶಿಣ ಪುಡಿ ಹಚ್ಚಿದ್ದಾರೆ.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಕಥೆ ಮುಗಿದ ಬಳಿಕ ದರ್ಶನ್‌ರನ್ನು ಆರ್‌.ಆರ್‌ ನಗರದಲ್ಲಿರುವ ಅವರ ಮನೆಗೆ ಡ್ರಾಪ್ ಮಾಡಲಾಗಿದೆ. ಶೆಡ್‌ನಿಂದ ದರ್ಶನ್ ಅವರನ್ನು ಮನೆಗೆ ಡ್ರಾಪ್ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments