ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಮಳೆಯಾಗಿದೆ. ಭಾರಿ ಮಳೆಯಿಂದ ರಾಜಕಾಲುವೆಗಳು ತುಂಬಿ ಹರಿದಿವೆ.
ಹಲವು ರಸ್ತೆಗಳಲ್ಲಿ ಮಳೆ ನೀರು ನಿಂತು, ಹೊಳೆಯಂತೆ ಕಾಣ್ತಿದ್ದವು. ಸಿಲ್ಕ್ ಬೋರ್ಡ್ ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಬೆಳ್ಳಂದೂರು ರಸ್ತೆಯಲ್ಲಿ ಮೊಣಕಾಲು ಮಟ್ಟದ ನೀರು ನಿಂತು ವಾಹನ ಸವಾರರು ಹೈರಾಣಾಗಿದ್ದಾರೆ.
ಮಳೆಯಿಂದಾಗಿ ಶಾಂತಿನಗರದಲ್ಲಿರುವ ಸಿಸಿಬಿ ಕಚೇರಿಗೂ ನೀರು ನುಗ್ಗಿದೆ. ಕಚೇರಿಯ ಕೆಳ ಮಹಡಿಯಲ್ಲಿ ಮೊಣಕಾಲುವರೆಗೂ ನೀರು ನಿಂತಿದೆ. ಕೆಲ ಕಡತಗಳು ಹಾನಿಗೊಳಗಾಗಿದೆ.
ಕಾವೇರಿನಗರ, ಸಂಪಂಗಿರಾಮನಗರ, ಹೊರಮಾವು ಸುತ್ತಮುತ್ತ ಧಾರಾಕಾರ ವರ್ಷಧಾರೆಯಿಂದ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ರಾತ್ರಿಯಿಡಿ ಪರದಾಡಿದ್ದಾರೆ.
ಲಗ್ಗೆರೆ, ಜಯನಗರ, ಬಿಟಿಎಂ ಲೇಔಟ್ ಸೇರಿ ಹಲವೆಡೆ ಮರಗಳು ಧರೆಗುರುಳಿವೆ. ಯಲಹಂಕದ ಅಟ್ಟೂರಿನ ಕಾಶಿ ವಿಶ್ವನಾಥ ವಿಶ್ವನಾಥ ದೇವಾಲಯಕ್ಕೂ ಜಲ ದಿಗ್ಭಂದನ ಸೃಷ್ಟಿಯಾಗಿದೆ. ದೇವಸ್ಥಾನ ಕಲ್ಯಾಣಿ ತುಂಬಿ ಹರಿದು ದೇವಸ್ಥಾನದ ಅರ್ಧದಷ್ಟು ಭಾಗವು ಜಲಾವೃತವಾಗಿದೆ.