ಬೆಂಗಳೂರು: ಎಸ್‌ಐಟಿ ಕಚೇರಿಯಲ್ಲಿ ಮನಕಲುಕುವ ಸನ್ನಿವೇಶವೊಂದು ಕಂಡುಬಂದಿದೆ. ತಾಯಿ-ಮಗ ಅಕ್ಕ-ಪಕ್ಕದ ಕೊಠಡಿಯಲ್ಲಿದ್ದರೂ ಒಬ್ಬರನ್ನೊಬ್ಬರು ಮುಖ ನೋಡಲಾರದೇ ವಿಚಾರಣೆ ಎದುರಿಸಿರುವ ಪ್ರಸಂಗ ನಿಜಕ್ಕೂ ಮನ ಕಲುಕಿದೆ.
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಶುಕ್ರವಾರವಷ್ಟೇ ಎಸ್‌ಐಟಿ ವಿಚಾರಣೆ ಎದುರಿಸಿದರು.
ಕೆ.ಆರ್ ನಗರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರಿಗೆ ಶುಕ್ರವಾರ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತು. ಅಲ್ಲದೇ ಭವಾನಿ ಅವರನ್ನು ಯಾವುದೇ ಕಾರಣಕ್ಕೂ ಎಸ್‌ಐಟಿ ಬಂಧಿಸುವಂತಿಲ್ಲ, 5 ಗಂಟೆಗಳ ಕಾಲ ಮಾತ್ರ ಕಸ್ಟಡಿಯಲ್ಲಿ ಇಟ್ಟುಕೊಳ್ಳಬಹುದು ಎಂದು ಷರತ್ತು ವಿಧಿಸಿತ್ತು. ಈ ಹಿನ್ನೆಲೆ ಎಸ್‌ಐಟಿ ಕಚೇರಿಗೆ ವಕೀಲರೊಂದಿಗೆ ಖುದ್ದು ತೆರಳಿದ್ದ ಭವಾನಿ ರೇವಣ್ಣ, ತಾವು ವಿಚಾರಣೆ ಎದುರಿಸಿದ ಪಕ್ಕದ ಸೆಲ್‌ನಲ್ಲೇ ಮಗ ಪ್ರಜ್ವಲ್ ಇದ್ದರೂ ನೋಡಲಾಗದೇ ಹೊರಬಂದಿದ್ದಾರೆ.
ಸತತ ಒಂದೂವರೆ ತಿಂಗಳಿನಿಂದಲೂ ಮಗನ ಮುಖ ನೋಡದ ಭವಾನಿ ರೇವಣ್ಣ ಅವರು ಎಸ್‌ಐಟಿ ವಿಚಾರಣೆ ಮುಗಿಸಿ ಸೀದಾ ಹೊರಬಂದಿದ್ದಾರೆ. ಭವಾನಿ ಹಾಗೂ ಪ್ರಜ್ವಲ್ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿ, ಎಸ್‌ಐಟಿ ಹೇಳಿಕೆ ದಾಖಲಿಸಿಕೊಂಡಿದೆ.
ಇನ್ನೂ ಸಂತ್ರಸ್ತೆ ಅಪಹರಣ ಪ್ರಕರಣದ ವಿಚಾರಣೆ ನಡೆಸಿದ ಎಸ್‌ಐಟಿಗೆ ಭವಾನಿ ರೇವಣ್ಣ ಸರಿಯಾಗಿ ಸಹಕಾರ ನೀಡಿಲ್ಲ, ಕೇವಲ ಹಾರಿಕೆ ಉತ್ತರ ನೀಡಿ ಹೊರಬಂದಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com