Top Newsಆರೋಗ್ಯಸುದ್ದಿ

ಹೃದಯ ಸಮಸ್ಯೆ ಇರೋರಿಗೆ ಸೋಮವಾರ ಡೇಂಜರ್; ಯಾಕೆ ಈ ದಿನ ಹೆಚ್ಚು ಹೃದಯಾಘಾತ ಗೊತ್ತ? ಇಲ್ಲದೆ ಸ್ಟೋರಿ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳ ವೇಗ ಹೆಚ್ಚುತ್ತಿದೆ. ಹೃದಯಾಘಾತವು ಯಾವುದೇ ಸಮಯದಲ್ಲಿ ಸಂಭವಿಸಬಹುದಾದರೂ, ಸೋಮವಾರದಂದು ಅದರ ಅಪಾಯವು ಹೆಚ್ಚು! ಹಾರ್ಟ್​ ಅಟ್ಯಾಕ್​ನ ಅಪಾಯ ಇತರ ದಿನಗಳಿಗಿಂತ ಸೋಮವಾರ ಶೇಕಡಾ 13 ರಷ್ಟು ಹೆಚ್ಚಾಗಿದ ಸಭವಿಸುತ್ತದೆ ಎಂದು ಬ್ರಿಟಿಷ್ ಹಾರ್ಟ್ ಫೌಂಡೇಶನ್ ವರದಿ ಮಾಡಿದೆ.

ನಟಿ ಮಾಧುರಿ ದೀಕ್ಷಿತ್ ಅವರ ಪತಿ, ಪ್ರಸಿದ್ಧ Cardiothoracic ಸರ್ಜನ್ ಡಾ.ಶ್ರೀರಾಮ್ ನೆನೆ ಕೂಡ, ಸೋಮವಾರ ಬೆಳಗ್ಗೆ ಹೃದಯಾಘಾತದ ಅಪಾಯವು ಹೆಚ್ಚು ಎಂದಿದ್ದಾರೆ. ಹೀಗಾಗಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದರೆ ಜಾಗರೂಕರಾಗಿರುವುದು ಅತೀ ಸೂಕ್ತವಾಗಿದೆ.

ಅಂಕಿ-ಅಂಶಗಳ ಪ್ರಕಾರ.. ಸೋಮವಾರ ಹೃದಯಾಘಾತದ ಸಂಭವ ಇತರ ದಿನಗಳಿಗಿಂತ ಹೆಚ್ಚಿದೆ. ಇದನ್ನು ‘ನೀಲಿ ಸೋಮವಾರ’ ಎಂದು ಕರೆಯಲಾಗುತ್ತದೆ. ಸೋಮವಾರ ಬೆಳಗ್ಗೆ 6 ರಿಂದ 10 ಗಂಟೆಯ ನಡುವೆ ಹೃದಯಾಘಾತದ ಅಪಾಯ ಹೆಚ್ಚು ಎಂದು ನಂಬಲಾಗಿದೆ. ಇದು ಕೇವಲ ಊಹೆ ಆಗಿದೆ. ಮತ್ತು ಅದರ ಬಗ್ಗೆ ಯಾವುದೇ ನಿರ್ದಿಷ್ಟ ಅಧ್ಯಯನ ಇಲ್ಲ.

ತಜ್ಞರ ಪ್ರಕಾರ.. ಹೆಚ್ಚಿನ ಜನರು ವಾರಾಂತ್ಯದಲ್ಲಿ ತಡವಾಗಿ ಮಲಗುತ್ತಾರೆ. ವಾರಾಂತ್ಯದಲ್ಲಿ ಕೆಲವರು ಸಿನಿಮಾ ನೋಡಲು ಹೋಗುತ್ತಾರೆ, ಕೆಲವರು ಪಾರ್ಟಿ ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ರಾತ್ರಿಯಲ್ಲಿ ನಿದ್ರೆಯ ವಿಳಂಬ ಮತ್ತು ಬೆಳಗ್ಗೆ ಏಳುವ ಸಮಯದಲ್ಲಿ ಬದಲಾವಣೆ ಆಗುತ್ತದೆ. ಇದರಿಂದ ಸಿರ್ಕಾಡಿಯನ್ ರಿದಮ್ ಬದಲಾಯಿಸುತ್ತದೆ. ಈ ಕಾರಣದಿಂದಾಗಿ ರಕ್ತದೊತ್ತಡ ಮತ್ತು ಕಾರ್ಟಿಸೋಲ್ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ತಜ್ಞರು.

Comments (0)

Your email address will not be published. Required fields are marked *

Back to top button