ಹೈದರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಾಕಷ್ಟು ಕುತೂಹಲದ ಚರ್ಚೆಯಾಗಿದೆ. ಈ ಪ್ರಕರಣಕ್ಕೂ ಅಲ್ಲು ಅರ್ಜುನ್​ಗೂ ಕನೆಕ್ಷನ್ ಕೊಟ್ಟು ಅವರನ್ನು ಜೈಲಿಗೆ ಹೋಗುವಂತೆ ಮಾಡಿತ್ತು. ಆದರೆ ಮಧ್ಯಂತರ ಜಾಮೀನು ಪಡೆದು ಅಲ್ಲು ಅರ್ಜುನ್ ಹೊರಗಡೆ ಬಂಧಿದ್ದಾರೆ. ಈ ಪ್ರಕರಣದಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೈವಾಡ ಇದೆ ಅಂತ ಎಲ್ಲಾ ಕಡೆ ಸುದ್ದಿ ಅಬ್ಬಿತ್ತು. ಈ ವಿಚಾರ ಚರ್ಚೆಯಲ್ಲಿ ಇರುವಾಗಲೇ ಅವರು ಅಲ್ಲು ಅರ್ಜುನ್ ವಿರುದ್ಧ ಸಿಎಂ ರೇವಂತ್ ರಡ್ಡಿ ಕೋಪವನ್ನ ವ್ಯಕ್ತಪಡಿಸಿದರು.

ಇತ್ತೀಚೆಗೆ ರೇವಂತ್ ರೆಡ್ಡಿ ಅವರು ಅಲ್ಲು ಅರ್ಜುನ್ ವಿರುದ್ಧ ಪ್ರತಿಕ್ರಿಯೆಸಿದ್ದು, ಈ ವೇಳೆ ಅವರು ಪೊಲೀಸ್ ಕ್ರಮವನ್ನು ಮೆಚ್ಚಿಕೊಂಡಿದ್ದಾರೆ. ‘ಅಲ್ಲು ಅರ್ಜುನ್ ಯುದ್ಧ ಗೆದ್ದಿಲ್ಲ. ಸಿನಿಮಾ ಮಾಡಿ ಹಣವನ್ನು ಗಳಿಸಿಕೊಂಡಿದ್ದಾರೆ ಅಷ್ಟೇ’ ಎಂದು ನೇರಮಾತುಗಳಲ್ಲಿ ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ, ಸಂತ್ರಸ್ತ ಕುಟುಂಬದ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.

ಇದು ಪಕ್ಕಾ ಉದ್ಯಮವಾಗಿದೆ. ಅವರು ಪಾಕಿಸ್ತಾನ-ಭಾರತ ಗಡಿಯಲ್ಲಿ ಯುದ್ಧ ಗೆದ್ದು ಬಂದಿಲ್ಲ. ಅವರು ಸಿನಿಮಾ ಮಾಡಿ, ಹಣ ಮಾಡಿಕೊಂಡು ಮನೆಗೆ ಹೋಗಿದ್ದಾರೆ ಅಷ್ಟೇ’ ಎಂದು ಅವರು ‘ಆಜ್ ತಕ್ ಅಜೆಂಡಾ’ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

‘ವ್ಯಕ್ತಿಯೊಬ್ಬರನ್ನು ಪೊಲೀಸರು ಕರೆದುಕೊಂಡು ಹೋಗಿದ್ದರ ಬಗ್ಗೆ ಇಷ್ಟು ದೊಡ್ಡ ಚರ್ಚೆ ಮಾಡುತ್ತಿದ್ದೀರಲ್ಲ. ಒಂದು ಪ್ರಾಣ ಹೋಗಿರುವ ಬಗ್ಗೆ ಯಾರಿಗೂ ಚಿಂತೆ ಇಲ್ಲ. ಪರಿವಾರ ಹೇಗಿದೆ ಎಂದು ಯಾರೂ ಕೇಳಿಲ್ಲ. ಅವರ ಮಗ ಆಸ್ಪತ್ರೆಯಲ್ಲಿ ಇದ್ದಾನೆ. ಅವನು ಕೋಮಾದಿಂದ ಹೊರ ಬಂದರೆ ಮುಂದೆ ಹೇಗೆ ಜೀವನ ನಡೆಸುಕೊಂಡು ಹೋಗುತ್ತಾನೆ ಎಂಬ ಬಗ್ಗೆ ಯಾರೂ ಚಿಂತಿಸಲ್ಲ’ ಎಂದಿದ್ದಾರೆ ಅವರು.

By Veeresh

Leave a Reply

Your email address will not be published. Required fields are marked *

Verified by MonsterInsights