ಬೆಂಗಳೂರು: ಪ್ರಜ್ವಲ್ ರೇವಣ್ಣ ಕೇಸ್‌ನ ಸಂತ್ರಸ್ತ ಮಹಿಳೆಯೊಬ್ಬರ ಕಿಡ್ನಾಪ್ ಆರೋಪ ಹೊತ್ತಿರುವ ಮಾಜಿ ಸಚಿವ ಎಚ್‌ಡಿ ರೇವಣ್ಣರನ್ನು ಈಗಾಗಲೇ ಎಸ್ಐಟಿ ತನಿಖಾ ತಂಡ ಬಂಧಿಸಿ ವಿಚಾರಣೆ ನಡೆಸುತ್ತಿತ್ತು. ಬಂಧನ ಆದಾಗಿನಿಂದ ಎಚ್‌ಡಿ ರೇವಣ್ಣ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯ ಕಾರಣದಿಂದ ಆಸ್ಪತ್ರೆಗೆ ಹೋಗುತ್ತಲೇ ಇದ್ದಾರೆ.
ಈ ಮಧ್ಯೆ ಇದೀಗ ಮತ್ತೆ ಎಚ್‌ಡಿ ರೇವಣ್ಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿಅಡ್ಮಿಟ್ ಆಗಿದ್ದಾರೆ. ಎದೆನೋವು ಹಾಗೂ ಹೊಟ್ಟೆ ಉರಿ ಹೆಚ್ಚಾದ ಹಿನ್ನಲೆ ಅಡ್ಮಿಟ್ ಮಾಡಬೇಕೆಂದು ವೈದ್ಯರು ಸೂಚನೆ ನೀಡಿದ್ದಾರೆ.