#Exclusive NewsTop Newsಜಿಲ್ಲೆರಾಜಕೀಯಸುದ್ದಿ

‘ಗಾಂಧಿ ಭಾರತ’ ಕಾಂಗ್ರೆಸ್​ ಅಧಿವೇಶನಕ್ಕೆ ಹೆಚ್​ಡಿ ಕುಮಾರಸ್ವಾಮಿ ವ್ಯಂಗ್ಯ…!

ಬೆಂಗಳೂರು : ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ‘ಗಾಂಧಿ ಭಾರತ’ ಹೆಸರಿನ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ದೇಶದ ವಿವಿಧೆಡೆಯಿಂದ ಕಾಂಗ್ರೆಸ್ ನಾಯಕರ ದಂಡೇ ಬರತೊಡಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಪ್ರಮುಖರು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.

ಇದಕ್ಕೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ, ಮಹಾತ್ಮ ಗಾಂಧಿ ಹೆಸರಿನಲ್ಲಿ ಮಾಡುತ್ತಿರುವ ಬೆಳಗಾವಿ ಸಮಾವೇಶದಲ್ಲಿ ಆಧುನಿಕ ಗಾಂಧಿಗಳ ಕಟೌಟ್​ಗಳೇ ರಾರಾಜಿಸುತ್ತಿವೆ ಎಂದು ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ವಿಷಯಗಳು ಗೊತ್ತಿಲ್ಲ. ಇವತ್ತು ಗಾಂಧೀಜಿಯವರ  ಶತಮಾನೋತ್ಸವದ ಕಾರ್ಯಕ್ರಮ ಅದ್ದೂರಿಯಾಗಿ ನಡೀತಾ ಇದೆ. ಬೆಳಗಾವಿಯಲ್ಲಿ ಗಾಂಧೀಜಿಯವರ ಹೆಸರಿನಲ್ಲಿ ಏನೋ ಒಂದು ವರ್ಷದ ಕಾರ್ಯಕ್ರಮ ಬೇರೆ ಮಾಡುತ್ತಂತೆ ಸರ್ಕಾರ. ಗಾಂಧೀಜಿಯವರ ಸ್ಮರಣೆಯಲ್ಲಿ ಕಾರ್ಯಕ್ರಮ, ಆದರೆ ಅಲ್ಲಿ ಹಾಕಿರುವ ಕಟೌಟ್​ಗಳೆಲ್ಲ ಈಗಿನ ಗಾಂಧಿಗಳದ್ದು ಎಂದರು.

Comments (0)

Your email address will not be published. Required fields are marked *

Back to top button