Thursday, September 11, 2025
20.3 C
Bengaluru
Google search engine
LIVE
ಮನೆ#Exclusive NewsTop Newsಕಾನ್ಸ್​​ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ; ಕ್ಷುಲ್ಲಕ ಕಾರಣಕ್ಕೆ ಜೈಲು ಪಾಲಾದ ಕಾಂಗ್ರೆಸ್ ಮುಖಂಡನ ಸಹೋದರರ

ಕಾನ್ಸ್​​ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ; ಕ್ಷುಲ್ಲಕ ಕಾರಣಕ್ಕೆ ಜೈಲು ಪಾಲಾದ ಕಾಂಗ್ರೆಸ್ ಮುಖಂಡನ ಸಹೋದರರ

ನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ ಅಂತ ಹೇಳಿದರೂ ಕೂಡ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಸಶಸ್ತ್ರ ಮೀಸಲು ಪಡೆಯಲ್ಲಿ ಕಾನ್ಸ್​ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ ಕಮತ ಎಂಬುವವರ ಮೇಲೆ ಕಾಂಗ್ರೆಸ್ ಮುಖಂಡನ ಸಹೋದದರರಾದ ಇಕ್ಬಾಲ್, ಅಮೀರ್ ಹಾಗೂ ಸಹಚ ಅಜಮತ್ ಮುಲ್ಲಾ ಮಾರಣಾಂತಿಕ ಹಲ್ಲೆ ನಡೆಸಿದಿದ್ದಾರೆ.

10ನೇ ತಾರೀಕು ಸಾಯಂಕಾಲ 6 ಗಂಟೆಯ ಸುಮಾರಿಗೆ ಸವದತ್ತಿಯಿಂದ ಟೇಲರ್ ಒಬ್ಬರ ಬಳಿ ಬಸವರಾಜ ಕಮತ ಎಂಬುವವರು ತಮ್ಮ ಸ್ನೇಹಿತನ ಜೊತೆ ಹೊರಟಿದ್ದರು. ಈ ವೇಳೆ ತಮಟಗಾರ ಅವರ ಸಹೋದರರೆಂಬ ಪುಂಡರ ಪಡೆ ದಾರಿ ಮಧ್ಯೆ ಕಾರನ್ನು ನಿಲ್ಲಿಸಿರುತ್ತಾರೆ. ಅದು ಅಲ್ಲದೇ ಬಲಗಡೆ ಬಾಗಿಲನ್ನೂ ಕೂಡ ತೆಗೆದಿರುತ್ತಾರೆ. ಇದನ್ನು ಕಾನ್ಸ್​ಟೇಬಲ್ ಬಸವರಾಜ್ ಪ್ರಶ್ನಿಸಿದ್ದಾರೆ. ಹೀಗೆ ಮಾಡುವುದು ಎಷ್ಟು ಸರಿ ಎಂದು ಕೇಳಿದ್ದಾರೆ. ಇಷ್ಟಕ್ಕೆ ನಮ್ಮನ್ನು ಯಾರು ಅಂತ ತಿಳಿದುಕೊಂಡಿದ್ದೀಯಾ ಎಂದು ಏಕಾಏಕಿ ಮೂವರು ಸೇರಿ ಬಸವರಾಜ್ ಮೇಲೆ ಹಲ್ಲೆ ಮಾಡಿ ಬ್ಲೇಡ್​ನಿಂದ ಮುಖವನ್ನು ಕೊಯ್ದಿದ್ದಾರೆ. ಆರೋಪಿಗಳನ್ನು ಕಾಂಗ್ರೆಸ್ ಮುಖಂಡ‌ ಇಸ್ಮಾಯಿಲ್ ತಮಟಗಾರ ಸಹೋದರರಾದ ಇಕ್ಬಾಲ್, ಅಮೀರ್​ ಹಾಗೂ ಆತನ ಸಹಚರ ಅಜಮತ್ ಮುಲ್ಲಾ ಎಂದು ಗುರುತಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಬಸವರಾಜ್​, ಹೀಗೆಲ್ಲಾ ಮಾಡಬಾರದು ಎಂದು ಹೇಳಿ ನಾವು ನಮ್ಮ ಪಾಡಿಗೆ ನಾವು ಬೈಕ್ ಮೇಲೆ ಹೊರಟಿದ್ದೇವು. ಆದರೂ ಕೂಡ ಕಾರ್​ ಚಲಾಯಿಸಿಕೊಂಡು ಬಂದು ನಮ್ಮನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಕೊನೆಗೆ ಮುಖಕ್ಕೆ ಬ್ಲೇಡಿನಿಂದ ಬೀಸಿದರು. ನಾನು ಮುಖವನ್ನು ಕಳೆಗೆ ಮಾಡಿದ್ದರಿಂದ ಮುಖಕ್ಕೆ ಬೀಳಬೇಕಾಗಿದ್ದ ಬ್ಲೇಡ್, ಕಣ್ಣಿನ ಪಕ್ಕದಿಂದ ಜಾರಿಕೊಂಡು ಹೋಗಿದೆ. ಎಂದು ಹೇಳಿದ್ದಾರೆ.

ಇನ್ನು ಹಲ್ಲೆಗೆ ಒಳಗಾದ ಬಸವರಾಜ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಉಪನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಮೂವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ‌ಬಸವರಾಜ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಧಾರವಾಡ ಉಪನಗರ ಠಾಣೆಯಲ್ಲಿ 307 ಅಡಿ ದೂರು ದಾಖಲಾಗಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಆರೋಪಿಗಳನ್ನು ಜೈಲು ಪಾಲಾಗುವಂತೆ ಮಾಡಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments