ಬೆಂಗಳೂರು : ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಜೀವನದಲ್ಲೇ ಅತ್ಯುತ್ತಮ ಮೂವಿ ಎಂದರೆ ಅದು ಕಾಟೇರ. ಡಿಸೆಂಬರ್ 29ರಂದು ರಿಲೀಸ್ ಆಗಿದ್ದ ಕಾಟೇರ ಸಿನಿಮಾಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದರು. ಈ ಸಿನಿಮಾವನ್ನು ಸ್ಯಾಂಡಲ್ವುಡ್ನ ಎಲ್ಲ ಸ್ಟಾರ್ಸ್ ವೀಕ್ಷಣೆ ಮಾಡಿ ವ್ಹಾವ್ ಎಂದಿದ್ದಾರೆ. ಇದರ ಬೆನ್ನಲ್ಲೇ ವೈಮನಸ್ಸಿನಿಂದ ದೂರವಿದ್ದರೂ ಕಿಚ್ಚ ಸುದೀಪ್ ಅವರು ತಮ್ಮ ಕುಷುಕು ಗೆಳೆಯ ದರ್ಶನ್ ಅವರ ಕಅಟೇರ ಸಿನಿಮಾ ನೋಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಯಾಂಡಲ್ವುಡ್ನ ಕಿಚ್ಚ ಸುದೀಪ್ ಅವರಿಗೆ ಸಿನಿಮಾ ಯಾವಾಗ ನೋಡ್ತರಾ ಎಂದು ಮ್ಯಾಡ್ ಮ್ಯಾಕ್ಸ್ ಎನ್ನುವ ಖಾತೆಯಿಂದ ಎಕ್ಸ್ನಲ್ಲಿ ಪ್ರಶ್ನೆ ಮಾಡಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಕಿಚ್ಚ ಅವರು , ಫುಲ್ ಕನ್ಫ್ಯೂಷನ್ ಉತ್ತರ ಕೊಟ್ಟಿದ್ದಾರೆ. ನಾನು ನೋಡಿಲ್ಲ ಅಂತ ನಿಮಗೆ ಯಾರಾದ್ರು ಹೇಳಿದ್ರಾ ಅಂತ ಮರುಪ್ರಶ್ನೆ ಹಾಕಿದ್ದಾರೆ. ಅಂತೂ ಪ್ರಶ್ನೆ ಕೇಳಿದವರ ತಲೆಗೆ ಹುಳ ಬಿಟ್ಟಿದ್ದಾರೆ ಕಿಚ್ಚ. ಹಾಗಾದರೆ ಸುದೀಪ್ ಅವರು ಈಗಾಗಲೇ ಕಾಟೇರ ಸಿನಿಮಾ ನೋಡಿದ್ದಾರಾ, ಇನ್ನು ನೋಡಿಲ್ವಾ ಎನ್ನುವ ಫುಲ್ ಕನ್ಫ್ಯೂಷನ್ನಲ್ಲಿ ಅಭಿಮಾನಿಗಳಿದ್ದಾರೆ.
ಈ ಹಿಂದೆ ಮಾತನಾಡುವಾಗ ಸುದೀಲ್ ಅವರು ಕಾಟೇರ ಮೂವಿ ನೋಡುತ್ತಾರೆ ಎಂದು ನಿರ್ದೇಶಕ ತರುಣ್ ಸುದೀರ್ ಹೇಳಿದ್ದರು. ಹೀಗಾಗಿ ಸಿನಿಮಾ ನೋಡಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನಿಖರ ಮಾಹಿತಿ ತಿಳಿದು ಮಂದಿಲ್ಲ. ಸದ್ಯ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಕಿಚ್ಚ ಸುದೀಪ್ ಕಾಟೇರ ಸಿನಿಮಾ ಮೋಡಿದ್ದಾರಅ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ.
https://twitter.com/KicchaSudeep/status/1747058778070303016?ref_src=twsrc%5Etfw%7Ctwcamp%5Etweetembed%7Ctwterm%5E1747058778070303016%7Ctwgr%5E7c346eb562757a54e3c634c960d5ca529e0d19a0%7Ctwcon%5Es1_&ref_url=https%3A%2F%2Fnewsfirstlive.com%2Fhas-kiccha-sudeep-seen-darshans-kaatera-movie%2F
ಇನ್ನು ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿರುವ ಟ್ವೀಟ್ಗೆ ಅಭಿಮಾನಿಗಳು ವಿಧ ವಿಧವಾದ ಕಾಮೆಂಟ್ ಮಾಡುತ್ತಿದ್ದಾರೆ. ಬಬ್ರುವಾಹನ ಕರ್ನಾಟಕ ಎನ್ನುವ ಎಕ್ಸ್ ಅಕೌಂಟ್ ಥ್ಯಾಂಕ್ಸ್ ಸರ್ ಎಂದು ಹೇಳಿದ್ದಾರೆ. ಇನ್ನೊಬ್ಬರು ಅರ್ಥ ಆಗಲಿಲ್ಲ ಸುದೀಪ್ ಸರ್ ಕನ್ನಡದಲ್ಲಿ ಹೇಳಿ ಅಂತ ಕಾಮೆಂಟ್ ಮಾಡಿದ್ದಾರೆ.