Wednesday, April 30, 2025
29.2 C
Bengaluru
LIVE
ಮನೆಜಿಲ್ಲೆಹರಿಪ್ರಸಾದ ಹೇಳಿಕೆ ಖಂಡನೀಯ, ಕೂಡಲೇ ಬಂಧಿಸಬೇಕು: ಕಟೀಲ್‌

ಹರಿಪ್ರಸಾದ ಹೇಳಿಕೆ ಖಂಡನೀಯ, ಕೂಡಲೇ ಬಂಧಿಸಬೇಕು: ಕಟೀಲ್‌

ಮಂಗಳೂರು: ರಾಜ್ಯದಲ್ಲಿ ಗೋಧ್ರಾ ಮಾದರಿ ಹತ್ಯಾಕಾಂಡಕ್ಕೆ ಸಂಚು ನಡೆಯುತ್ತಿದೆ ಎಂದು ಹೇಳಿಕೆ ನೀಡಿರುವ ಹಿರಿಯ ಕಾಂಗ್ರೆಸ್‌ ಮುಖಂಡ ಹರಿಪ್ರಸಾದ್‌ ಅವರನ್ನು ಕೂಡಲೇ ಬಂಧನ ಮಾಡಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್ ಅಗ್ರಹಿಸಿದರು.

ಮಂಗಳೂರಿನಲ್ಲಿ ಗುರುವಾರ ಪತ್ರಕರ್ತರ ಜತೆಗೆ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ದ್ವಂದ ಹೇಳಿಕೆ ನೀಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೋಡಿಕೊಂಡು ಪರಿಶೀಲಿಸುತ್ತೇವೆ ಎಂಬಿತ್ಯಾದಿ ಉತ್ತರ ನೀಡುತ್ತಾರೆ. ಬಿ.ಕೆ.ಹರಿಪ್ರಸಾದ್ ಅವರ ಬಳಿ ಈ ಕುರಿತ ಮಾಹಿತಿ ಇದ್ದರೆ ಗೃಹ ಇಲಾಖೆಗೆ ನೀಡಬೇಕು. ಇಲ್ಲದಿದ್ದರೆ ತಕ್ಷಣವೇ ಅವರ ಬಂಧನ ಆಗಬೇಕು. ಈ ರೀತಿ ಬೇಕಾಬಿಟ್ಟಿ ಹೇಳಿಕೆ ನೀಡುವದನ್ನು ರಾಜ್ಯದ ಜನರ ಪರವಾಗಿ ಖಂಡಿಸಲಾಗುತ್ತದೆ ಎಂದರು.

Bengaluru: Parameshwar & Siddaramaiah to sink differences, put up united show in March - Daijiworld.com

ಗೋದ್ರಾ ಘಟನೆ ನಡೆದಾಗ ಅದರ ಹಿಂದೆ ರೂವಾರಿಗಳಂತೆ ಇದ್ದದ್ದು ಕಾಂಗ್ರೆಸ್. ಗುಜರಾತ್‌ನಲ್ಲಿ ನರೇಂದ್ರ ಮೋದಿ ಅವರ ಸರಕಾರವನ್ನು ಕೇಡವಬೇಕು ಎಂದು ಹುನ್ನಾರವನ್ನು ಆಗ ಕಾಂಗ್ರೆಸ್ ನಡೆಸಿತ್ತು. ಈಗ ಮತ್ತೆ ಕಾಂಗ್ರೆಸ್‌ನ ಹಿರಿಯ ನಾಯಕ ಹರಿಪ್ರಸಾದ್‌ ಈ ರೀತಿ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಷಡ್ಯಂತ್ರವನ್ನು ಬಹಿರಂಗ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Karnataka News: Congress leader BK Hariprasad challenges CM Siddaramaiah, says 'I know how to bring down…' | Mint

ಹಿಂದೂ ರಾಷ್ಟ್ರ ಆದ ಕಾರಣಕ್ಕೆ ಈ ದೇಶದಲ್ಲಿ ಜಾತ್ಯತೀತ ತತ್ವಗಳು ಇನ್ನೂ ಉಳಿದುಕೊಂಡಿವೆ. ಹಿಂದೂ ರಾಷ್ಟ್ರ ಆಗಿರುವುದರಿಂದಲೇ ಈ ದೇಶದ ಆಡಳಿತ ಉತ್ತಮ ರೀತಿಯಲ್ಲಿ ನಡೆಯುತ್ತದೆ. ಕಾಂಗ್ರೆಸ್ ಆಡಳಿತ ಇರುವಾಗ ದೇಶದಲ್ಲಿ ಪಾಕಿಸ್ತಾನದಲ್ಲಿ ಇದ್ದಂತಹ ಆಡಳಿತ ವ್ಯವಸ್ಥೆ ಇತ್ತು ಎಂದು ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದರು.

Karnataka CM Siddaramaiah appoints MLA Rayareddy as his economic advisor | Bengaluru - Hindustan Times

 

ಸಿದ್ದರಾಮಯ್ಯ ಅವರೇ ನನಗೆ ರಾಮ ಎಂಬ ಕಾಂಗ್ರೆಸ್‌ ಮುಖಂಡ ಎಚ್‌.ಆಂಜನೇಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಮನಿಗೆ ರಾಮನೇ ಹೋಲಿಕೆಯೇ ಹೊರತು, ಸಿದ್ದರಾಮಯ್ಯ ಅವರನ್ನು ಹೋಲಿಕೆ ಮಾಡುವುದು ಅಷ್ಟು ಸರಿಯಲ್ಲ. ರಾಮನ ಹೆಸರಿಟ್ಟುಕೊಂಡವರೆಲ್ಲ ರಾಮ ಆಗಲು ಸಾಧ್ಯವಿಲ್ಲ. ರಾಮ ಎಂಬುದು ಭಾವನಾತ್ಮಕ ನಂಬಿಕೆಗಳ ಸಂಕೇತ ಎಂದು ತೀವಿದರು.

ನನಗೆ ‌ಸಚಿವ ಸ್ಥಾನ ನೀಡುವಂತೆ ಪ್ರತಿಭಟಿಸುವುದು ಸರಿಯಲ್ಲ: ಬೆಂಬಲಿಗರಿಗೆ ಎಚ್.ಆಂಜನೇಯ ಮನವಿ | H. Anjaneya Request To His Supporters For Not Doing Protest - Kannada Oneindia

ರಾಜ್ಯದಲ್ಲಿ ರಾಮ ಜನ್ಮಭೂಮಿಯ ಹೋರಾಟದ ಕರಸೇವಕರನ್ನು ಬಂಧಿಸಲಾಗುತ್ತಿದೆ. ನಾನೂ ಕರಸೇವಕ, ರಾಮಭಕ್ತ. ಸರಕಾರಕ್ಕೆ ತಾಕತ್ತೂ ಇದ್ದರೆ ನನ್ನ ಬಂಧಿಸಲಿ. ಎಲ್ಲಾ ಕರಸೇವಕರನ್ನು ಬಂಧಿಸಲಿ. ಇಲ್ಲದಿದ್ದರೆ ನಮ್ಮ ಹೋರಾಟ ನಡೆಯುತ್ತದೆ ಎಂದು ಎಚ್ಚರಿಸಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments