ಜಿಲ್ಲೆರಾಜ್ಯ

ಎಂಟಿಎಸ್ ಕಾಲನಿಯ ರೈಲ್ವೇ ಅಭಿವೃದ್ಧಿ ಪ್ರಧಿಕಾರ 13 ಎಕರೆ ಲೀಸ್ ವಿರೋಧಿ ಕೈ ಪ್ರೊಟೆಸ್.

ರೈಲ್ವೇ ಅಭಿವೃದ್ಧಿ ಪ್ರಧಿಕಾರದ ಹುಬ್ಬಳ್ಳಿಯ ಎಂಟಿಎಸ್ ಬಳಿರು 13 ಎಕರೆ ಜಾಗವನ್ನು ಅತೀ ಕಡಿಮೆ ಬೆಲೆಗೆ ಲೀಸ್ ಹಾಕುತ್ತಿರುವ ಕೇಂದ್ರ ರೈಲ್ವೇ ಇಲಾಖೆಯ ನಿರ್ಧಾರ ಖಂಡಿಸಿ ಹಾಗೂ ಲೀಸ್ ನಿರ್ಧಾರದಿಂದ ಹಿಂದೆ ಸರಿಯಲು ಅಗ್ರಹಿಸಿ, ಕಾಂಗ್ರೆಸ್ ನಾಯಕರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹು-ಧಾ ಮಾಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ, ‌ನಗರದ ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿಯಿಂದ ಎಂಟಿಎಸ್ ಕಾಲೋನಿಯವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು. ಇನ್ನೂ ಮೆರವಣಿಗೆ ಉದ್ದಕ್ಕೂ ಕೇಂದ್ರ ಸರ್ಕಾರ, ಕೇಂದ್ರ ರೈಲ್ವೆ ಇಲಾಖೆಯ ಸಚಿವರು ಸೇರಿ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಧಿಕ್ಕಾ ಕೂಗಿ ಆಕ್ರೋಶ ಹೊರಹಾಕಿದರು.

ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವ ಸೇರಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾವಚಿತ್ರದ ಪ್ರತಿಕೃತಿದಹಿಸಿ ತಮ್ಮ ಅಸಮಧಾನ ವ್ಯಕ್ತಪಡಿಸಿದರು. ಲೋಕಸಭಾ ಚುನಾವಣೆ ಹತ್ತಿರವಿರುವ ಸಮಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ರೈಲ್ವೇ ಇಲಾಖೆಯ ಜಾಗವನ್ನು ಅತಿ ಕಡಿಮೆ ಬೆಲೆಗೆ 99 ಲೀಸ್ ಹಾಕಲಾಗುತ್ತಿದೆ. ಇದೂ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹುಬ್ಬಳ್ಳಿ ಎಂಟಿಎಸ್ ಕಾಲೋನಿಯ ಬಳಿಯಲ್ಲಿರುವ ರೈಲ್ವೇ ಅಭಿವೃದ್ಧಿ ಪ್ರಧಿಕಾರದ 13 ಎಕರೆ ಜಾಗ ಇರುವ ಪ್ರದೇಶದಲ್ಲಿ ಭೂಮಿಗೆ ತುಂಬಾ ಬೇಡಿಕೆ ಇರುವಂತಹ ಪ್ರದೇಶವಾಗಿದೆ. ಕೋಟಿ ಕೋಟಿ ಬೆಲೆ ಬಾಳು ಜಾಗವನ್ನು, ಕಡಿಮೆ ಬೆಲೆ ಲೀಸ್ ಕೋಡುತ್ತಿರುವದ ಹಿಂದೆ ಲೋಕಸಭಾ ಚುನಾವಣೆ ಉದ್ದೇಶ ಕಾಣುತ್ತಿದೆ.

ಈ ಕೂಡಲೇ ಕೇಂದ್ರ ಸರ್ಕಾರ, ರೈಲ್ವೆ ಇಲಾಖೆ ಹಾಗೂ ಕೇಂದ್ರ ಸಚಿವ ಪ್ರಹ್ಲದ್ ಜೋಶಿ ಲೀಸ್ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಅಗ್ರಹಿಸಿದರು. ಇಂದು ಸಾಂಕೇತಿಕವಾಗಿ ಒ್ರತಿಭಟನೆ ಮಾಡಲಾಗಿದೆ, ಒಂದು ವೇಳೆ ನಿರ್ಧಾರ ಬದಲಿ ಆಗದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಇದೇವೇಳೆ ಕೈ ನಾಯಕರು ಕೇಂದ್ರ ಸರ್ಕಾರಕ್ಕೆ ಮತ್ತು ಕೇಂದ್ರ ರೈಲ್ವೆ ಸಚಿವರಿಗೆ ಎಚ್ಚರಿಕೆ ನೀಡಿದರು.

Comments (0)

Your email address will not be published. Required fields are marked *

Back to top button