ಮಂಡ್ಯ : ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕರ್ನಾಟಕ ಪ್ರವಾಸದ ವೇಳೆ ರಾಜ್ಯ ಸರ್ಕಾರ ಕಾರು ನೀಡದೆ ಶಿಷ್ಟಾಚಾರ ಉಲ್ಲಂಘಿಸಿದೆ ಎಂಬ ಆರೋಪಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಮಾಜಿ ಸಂಸದೆ ಸುಮಲತಾ ಉಪಯೋಗಿಸುತ್ತಿದ್ದ ಕಾರು ಬಳಸಲು ಕುಮಾರಸ್ವಾಮಿ ನಿರಾಕರಿಸಿದರೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.
ಚಲುವರಾಯಸ್ವಾಮಿ ಹೇಳಿದ್ದೇನು?
ಕುಮಾರಸ್ವಾಮಿ ಈ ಹೇಳಿಕೆಯ ಬೆನ್ನಲ್ಲೇ ಸಚಿವ ಚಲುವರಾಯಸ್ವಾಮಿ ಇನ್ನೊಂದು ಬಾಂಬ್‌ನ್ನು ಸಿಡಿಸಿದ್ದಾರೆ. ಕುಮಾರಸ್ವಾಮಿ ನನಗೆ ಕಾರು ಕೊಟ್ಟಿಲ್ಲ ಎಂದು ಹೇಳಿರೋದು ನೋಡಿದ್ರೆ ಅದನ್ನು ಕೇಳಲು ಆಗುತ್ತಿಲ್ಲ. ಕುಮಾರಸ್ವಾಮಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಳಸುತ್ತಿದ್ದ ಕಾರನ್ನು ನನಗೆ ಬೇಡ ಅಂದಿದ್ದಾರೆ. ನಾವು ಏನು ಮಾಡಲು ಸಾಧ್ಯ, ಸುಮಲತಾ ಬಳಸುತ್ತಿದ್ದ ಕಾರನ್ನು ಕುಮಾರಸ್ವಾಮಿ ಏಕೆ ಬೇಡ ಎಂದಿದ್ದಾರೆ ಗೊತ್ತಿಲ್ಲ. ನಾವು ಕಾರು ಕೊಡಲ್ಲ ಎಂದು ಹೇಳಿಲ್ಲ, ಅವರೇ ಕಾರು ಬೇಡ ಎಂದಿದ್ದಾರೆ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.


