Tuesday, March 3, 2026
31.7 C
Bengaluru
Google search engine
LIVE
ಮನೆ#Exclusive Newsಗುಟ್ಕಾ ಪಾನ್ ಪಾರಗ್ ಕೂಡ ನಕಲಿ ; ಲಕ್ಷಾಂತರ ಮೌಲ್ಯದ ಗುಟ್ಕಾ ಸೀಜ್.!

ಗುಟ್ಕಾ ಪಾನ್ ಪಾರಗ್ ಕೂಡ ನಕಲಿ ; ಲಕ್ಷಾಂತರ ಮೌಲ್ಯದ ಗುಟ್ಕಾ ಸೀಜ್.!

 

ಬೆಂಗಳೂರು: ಪಾನ್ ಪಾರಗ್ ಗುಟ್ಕಾ, ಪದಾರ್ಥಗಳೆ ಆರೋಗ್ಯಕ್ಕೆ ಹಾನಿಕಾರಕ. ಇವು ಕಂಪನಿಯಿಂದ ಬಂದ್ರೆ ಒಂದಷ್ಟು ನಿಯಮಗಳನ್ನ ಪಾಲನೆ ಮಾಡ್ತಾರೆ. ಆದ್ರೆ ಹಣ ಮಾಡೋ ಉದ್ದೇಶದಿಂದ ವ್ಯವಸ್ಥಿತವಾಗಿ ನಕಲಿ ಗುಟ್ಕಾ ತಯಾರು ಮಾಡ್ತಿದ್ದ ಬೃಹತ್ ಜಾಲವನ್ನ ಸೋಲದೇವನಹಳ್ಳಿ ಪೊಲಿಸ್ರು ಸೀಜ್ ಮಾಡಿದ್ದಾರೆ. ಒಟ್ಟ ಮೂರು ಗೋದಾಮಾನಲ್ಲಿ ಆರೋಪಿಗಳ ಗುಟ್ಕಾ ತಯಾರು ಮಾಡೋ ಕಚ್ಚಾ ವಸ್ತುಗಳನ್ನ ಇಟ್ಟುಕೊಂಡು ಪ್ಯಾಕ್ ಮಾಡಿ ಮಾರುಕಟ್ಟೆ ಯಲ್ಲಿ ಅಸಲಿ ಗುಟ್ಕಾ ದಂತೆ ಮಾರಾಟ ಮಾಡ್ತಿದ್ರು. ಸೋಲದೇವಹಳ್ಳಿಯ ಗುಣಿ ಅಗ್ರಹಾರದ ಸುತ್ತಾಮುತ್ತ ಮೂರು ಕಡೆ ಕಚ್ಚಾ ವಸ್ತು ಶೇಖರಿಸಿ ಪ್ಯಾಕ್ ಮಾಡ್ತಿದ್ರು. ಅನ್ವೇಶ್ ಐಪಿಆರ್ ಸಂಸ್ಥೆ ನೀಡಿದ ಖಚಿತ ಮಾಹಿತಿ ಮೇರೆಗಡ ಪೊಲೀಸ್ರು ದಾಳಿ ನಡೆಸಿದ್ದಾರೆ. ಸದ್ಯ ಒಂದು ಗೋದಾಮನ್ನ ಸೋಮದೇವನಹಳ್ಳಿ ಪೊಲೀಸ್ರು ಸೀಜ್ ಮಾಡಿ ಲಕ್ಷಾಂತರ ಮೌಲ್ಯದ ಕಚ್ಚಾ ವಸ್ತುಗಳನ್ನ ಸೀಜ್ ಮಾಡಿದ್ದಾರೆ. ಇನ್ನೂ ಎರಡು ಗೋಡಾನಿನಲ್ಲಿ ಕೋಟ್ಯಾಂತರ ‌ಮೌಲ್ಯದ ಕಚ್ಚಾ ವಸ್ತುಗಳಿರೋ ಶಂಕೆ ವ್ಯಕ್ತವಾಗಿದ್ದು, ಸದ್ಯ ಆರೋಪಿ ತಲೆ ಮರಸಿಕೊಂಡಿದ್ದು ಪೊಲೀಸ್ರು ಹುಡುಕಾಟ ನಡೆಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments