ಕಲಬುರಗಿ : ನಗರದ ವೈಷ್ಟೋದೇವಿ ಮಂದಿರದ ಹತ್ತಿರ ಸುಲಿಗೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಕಲಬುರಗಿಯ ರಿಂಗ್ ರಸ್ತೆಯ ಜಾಫರಾಬಾದ್ ಕ್ರಾಸ್ ಸಮೀಪ ಮಂಗಳವಾರ ಸಂಜೆ ಜರುಗಿದೆ.
ಇಮ್ಮಿಯಾಜ್ ಮಕ್ಯುಲ್ ಗಿಣಿ(28) ಪೊಲೀಸರ ಗುಂಡೇಟಿಗೆ ಗಾಯಗೊಂಡಿರುವ ರೌಡಿಶೀಟರ್ . ಸದರಿ ಪ್ರಕರಣದಲ್ಲಿ 3 ಜನ ಆರೋಪಿತರನ್ನು ಈಗಾಗಲೇ ಬಂಧಿಸಲಾಗಿದೆ. ಮತ್ತಷ್ಟು ತನಿಖೆಯ ನಂತರ ಹಣ್ಣಿನ ವ್ಯಾಪಾರಿ ಇಮ್ಮಿಯಾಜ್ 4ನೇ ಆರೋಪಿಯಾಗಿರುವುದು ತಿಳಿದುಬಂದಿದೆ. ಪೊಲೀಸರು ಆರೋಪಿಯನ್ನು ಜಾಫರಾಬಾದ್ ಕ್ರಾಸ್ ಬಳಿ ವಶಕ್ಕೆ ಪಡೆದುಕೊಳ್ಳುವಾಗ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಲು ಮುಂದಾದಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಸಬ್ ಅರ್ಬನ್ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಬಸವರಾಜ್ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿ, ಆತನನ್ನು ಬಂಧಿಸಿದ್ದಾರೆ.


