ಭೀಮಾತೀರದಲ್ಲಿ ಗುಂಡಿನ ಸದ್ದಿಗೆ ನೆತ್ತರು ಹರಿದಿದೆ.. ಎದೆಗೆ ಗುಂಡಿಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನು ಕೊಲೆ ಮಾಡಿರುವ ಘಟನೆ ಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ನಡೆದಿದೆ..
ಭೀಮನಗೌಡ ಬಿರಾದಾರ ಎಂಬವರ ಮೇಲೆ ಗುಂಡಿನ ದಾಳಿ ನಡೆದಿದ್ದು, ತಲವಾರದಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಕಟಿಂಗ್ ಅಂಗಡಿಯಲ್ಲಿ ಚೇರ್ ಮೇಲೆ ಕುಳಿತ್ತಿದ್ದ ವೇಳೆ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಲಾಗಿದೆ.
ಗುಂಡಿನ ದಾಳಿಯ ಜೊತೆಗೆ ತಲವಾರದಿಂದ ಹಲ್ಲೆ ಮಾಡಲಾಗಿದ್ದು, ಭೀಮನಗೌಡ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯು ಗ್ರಾಮದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದ್ದು, ಮೃತದೇಹವನ್ನು ಸಂಬಂಧಿಕರು ವಿಜಯಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಭೀಮನಗೌಡ ಬಿರಾದಾರ, ಭೀಮಾತೀರದ ಮಹಾದೇವ ಸಾಹುಕಾರ್ ಬೈರಗೊಂಡ ಅವರ ಪರಮಾಪ್ತರಾಗಿದ್ದರು ಎನ್ನಲಾಗಿದ್ದು, ಘಟನಾ ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.