ರಾಜ್ಯವಿಶೇಷ

ಗುಡಿಬಂಡೆಯ ಕರಪ್ಟ್ THO ಡಾ.ನರಸಿಂಹಮೂರ್ತಿ ಸಸ್ಪೆಂಡ್.. ಫ್ರೀಡಂ ಟಿವಿಯಿಂದ ಲಂಚಾಸುರನ ಸಂಹಾರ!

ಚಿಕ್ಕಬಳ್ಳಾಪುರದ ಗುಡಿಬಂಡೆಯ ತಾಲೂಕು ವೈದ್ಯಾಧಿಕಾರಿ ಮಾಡ್ತಿದ್ದ ಲಂಚಬಾಕತನವನ್ನ ನಿಮ್ಮ ಫ್ರೀಡಂ ಟಿವಿ ಜಗಜ್ಜಾಹೀರು ಮಾಡಿತ್ತು. ಈ ವರದಿ ಸರ್ಕಾರದ ಕಣ್ಣಿಗೂ ಬಿದ್ದಿತ್ತು. ಇದೇ ವರದಿಯನ್ನ ಉಲ್ಲೇಖಿಸಿ ಈಗ ಇಂಥಾ ಲಂಚಬಾಕ ಭ್ರಷ್ಟ ಅಧಿಕಾರಿ ಡಾ.ನರಸಿಂಹ ಮೂರ್ತಿಯನ್ನು ಸರ್ಕಾರ ಅಮಾನತುಗೊಳಿಸಿದೆ.

ಗುಡಿಬಂಡೆಯ ತಾಲೂಕು ವೈದ್ಯಾಧಿಕಾರಿ ಡಾ.ನರಸಿಂಹ ಮೂರ್ತಿ ರೋಗಿಗಳ ಹತ್ತಿರ ಲಂಚ ಪಡೆಯುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ.

ವೈದ್ಯೋ ನಾರಾಯಣೋ ಹರಿಃ ಅಂತಾರೆ. ಆದ್ರೆ ಈ ಭ್ರಷ್ಟ ಅಧಿಕಾರಿ ಡಾ.ನರಸಿಂಹಮೂರ್ತಿ ಮಾತ್ರ ದುಡ್ಡು ಕೊಟ್ಟರಷ್ಟೇ ಟ್ರೀಟ್ಮೆಂಟ್ ಕೊಡುತ್ತಿದ್ದ. ಒಂದೊಂದು ಆಪರೇಷನ್​​ಗೂ ರೋಗಿಗಳ ಬಳಿ 20 ಸಾವಿರ ಲಂಚ ವಸೂಲಿ ಮಾಡ್ತಿದ್ದ.. ವೈದ್ಯಾಧಿಕಾರಿಯ ಲಂಚಬಾಕತನ ಫ್ರೀಡಂ ಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು..

ಈ ಸರ್ಕಾರಿ ಆಸ್ಪತ್ರೆಯಲ್ಲಿ ದಿನನಿತ್ಯ ಕನಿಷ್ಟ ಐದರಿಂದ ಹತ್ತು ಆಪರೇಷನ್ ನಡೆಯುತ್ತಿದ್ದು, ಒಂದು ಆಪರೇಷನ್ ಗೆ ಕನಿಷ್ಠ 20 ಸಾವಿರ ಫಿಕ್ಸ್ ಮಾಡಿದ್ದ. ಲಂಚಬಾಕ ಡಾಕ್ಟರ್​​​ಗೆ ಆಶಾ ಕಾರ್ಯಕರ್ತೆಯರೇ ಮಧ್ಯವರ್ತಿಗಳಾಗಿದ್ರು. ಈಗ ಲಂಚಬಾಕ ಅಧಿಕಾರಿ ಡಾ.ನರಸಿಂಹಮೂರ್ತಿಯನ್ನು ಸರ್ಕಾರ ಸಸ್ಪೆಂಡ್ ಮಾಡಿದೆ.

ಫ್ರೀಡಂ ಟಿವಿ ವರದಿ ಉಲ್ಲೇಖ

ಡಾ.ನರಸಿಂಹಮೂರ್ತಿ ಲಂಚಬಾಕತನದ ಬಗ್ಗೆ ರಹಸ್ಯ ಕಾರ್ಯಾಚರಣೆ ನಡೆಸಿ ಫ್ರೀಡಂ ಟಿವಿ ಆರೋಪಿಯನ್ನ ರೆಡ್ ಹ್ಯಾಂಡ್ ಆಗಿ ಸೆರೆಹಿಡಿದಿತ್ತು. ಈ ಬಗ್ಗೆ ವರದಿ ಪ್ರಸಾರವಾದ ಬೆನ್ನಲ್ಲೇ ಸರ್ಕಾರದ ಗಮನಕ್ಕೆ ಇದು ಬಂದಿದೆ. ಡಾ.ನರಸಿಂಹ ಮೂರ್ತಿಯ ಅಮಾನತು ಆದೇಶದಲ್ಲೂ ಆರೋಗ್ಯ ಇಲಾಖೆ ನಿಮ್ಮ ಫ್ರೀಡಂ ಟಿವಿ ವರದಿ ಬಗ್ಗೆ ಉಲ್ಲೇಖಿಸಿದ್ದಾರೆ. ಫ್ರೀಡಂ ಟಿವಿಯಲ್ಲಿ ಅಧಿಕಾರಿಯ ಲಂಚಬಾಕತನದ ಬಗ್ಗೆ ವರದಿ ಪ್ರಸಾರ ಮಾಡಿದೆ. ಅಧಿಕಾರಿ ಮಾಡಿದ ಈ ಲಂಚಬಾಕತನದಿಂದ ಆರೋಗ್ಯ ಇಲಾಖೆಗೆ ಮಸಿ ಬಳಿದಂತಾಗಿದೆ. ಹೀಗಾಗಿ ಡಾ.ನರಸಿಂಹಮೂರ್ತಿಯನ್ನು ಸಸ್ಪೆಂಡ್ ಮಾಡುತ್ತಿರುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.

Comments (0)

Your email address will not be published. Required fields are marked *

Back to top button