Freedom TV

ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕಾಯುಕ್ತ ಅಧಿಕಾರಿಗಳ ಬಲೆಗೆ…!

ತುಮಕೂರು:  ಇಂದು ಅಡಿಕೆ ಪಟ್ಟೆತಟ್ಟೆ ತಯಾರಿಸುವ ಫ್ಯಾಕ್ಟರಿ ಪರವಾನಗಿಯ ಕೆಲಸ ಮಾಡಿಕೊಡಲು 20 ಸಾವಿರ ಹಣದ ಬೇಡಿಕೆ ಇಟ್ಟಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ  ಹಾಗೂ ಪಿಡಿಒ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ.

ಕೊರಟಗೆರೆ ತಾಲ್ಲೂಕಿನ ಎಲೆರಾಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರಯ್ಯ ಹಾಗೂ ಪಿಡಿಒ ಕಿಶೋರ್ ಲಾಲ್ ಸಿಂಗ್ ಇಬ್ಬರು ಸೇರಿ ಎಲೆ ರಾಂಪುರ ಗ್ರಾಮದ ಆರ್ . ನಾಗೇಶ್ ರವರ ಬಳಿಕೆಲಸ ಮಾಡಲು ಇಪ್ಪತ್ತು ಸಾವಿರ ಹಣ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಲೋಕಾಯುಕ್ತ ತಂಡದ ಅಧಿಕಾರಿಗಳು ಹಾಗೂ ಲೋಕಾಯುಕ್ತ ಎಸ್ .ಪಿ ವಲಿಬಾಷ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

Comments (0)

Your email address will not be published. Required fields are marked *

Back to top button