Friday, September 12, 2025
21 C
Bengaluru
Google search engine
LIVE
ಮನೆUncategorizedಮುಸ್ಲಿಂ ಮತ ಬ್ಯಾಂಕ್ ಸೀಮಿತವಾಗಿ ಸರ್ಕಾರ ಯೋಚನೆ ಮಾಡ್ತಿದೆ - ಬಿ.ವೈ. ರಾಘವೇಂದ್ರ

ಮುಸ್ಲಿಂ ಮತ ಬ್ಯಾಂಕ್ ಸೀಮಿತವಾಗಿ ಸರ್ಕಾರ ಯೋಚನೆ ಮಾಡ್ತಿದೆ – ಬಿ.ವೈ. ರಾಘವೇಂದ್ರ

ಶಿವಮೊಗ್ಗ: ನೇಹಾ ಹಿರೇಮಠ ಕೊಲೆ  ಪ್ರಕರಣ ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಎರಡ್ಮೂರು ಅಹಿತಕರ ಘಟನೆಗಳು ನಡೆದಿದೆ ಆರೋಪಿ ಮನೆಗೆ ಪೊಲೀಸ್  ಭದ್ರತೆ ಕೊಟ್ಟಿದ್ದಾರೆ. ಕಾಂಗ್ರೆಸ್  ಸರ್ಕಾರದ ವರ್ತನೆ  ಸರಿಯಾಗಿಲ್ಲ,ರಾಜ್ಯದಲ್ಲಿ  ಗಾಂಜಾ ಸೇವನೆ  ಮಾಡಿ ಇಂತಹ ಘಟನೆ ಗಳು ನಡೆಯುತ್ತಿವೆ ಎಂದು ಆಕ್ರೋಶ ಹೊರಹಾಕಿದರು.

ಇನ್ನೂ  ಚನ್ನಗಿರಿಯಲ್ಲಿ ರಾಮನವಮಿ ದಿನ  ಹಲ್ಲೆ ನಡೆದಿದೆ. ಸಮಾಜ ವಿರೋಧಿ ಶಕ್ತಿಗಳಿಗೆ ಸರ್ಕಾರ ಬೆಂಬಲ ನೀಡುತ್ತಿದೆ. ಇಂತಹ ವಿಷಯಗಳನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಸ್ಲಿಂ ಮತ ಬ್ಯಾಂಕ್ ಸೀಮಿತವಾಗಿ ಸರ್ಕಾರ ಯೋಚನೆ ಮಾಡ್ತಿದೆ ಎಂದು ಕಿಡಿಕಾರಿದರು.

ರಾಜ್ಯಕ್ಕೆ   ಹೆಚ್ಚು ಗಾಂಜಾ  ಬರುತ್ತಿದೆ. ಇದರಿಂದ ಗಾಂಜಾ ಹಾವಳಿ ಜೋರಾಗಿದೆ. ಆರೋಪಿಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಕಾಂಗ್ರೆಸ್  ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೆವಾಲ್  ವಿರುದ್ಧ  ಸಂಸದ ಬಿ.ವೈ.ರಾಘವೇಂದ್ರ  ವಾಗ್ದಾಳಿ ನಡೆಸಿದರು.

ಗ್ಯಾರಂಟಿ ಮೂಲಕ ಜನರಿಗೆ  ಕಾಂಗ್ರೆಸ್  ಪಕ್ಷ ಮೋಸ ಮಾಡುತ್ತಿದೆ. ಜನರಿಗೆ  ಗ್ಯಾರಂಟಿ ಮೂಲಕ ಆಮಿಷ ತೋರುತ್ತಿದ್ದಾರೆ. ಈ ಚುನಾವಣೆಯಲ್ಲಿ ಹೆಚ್ಚಿನ ಅಂತರದಿಂದ ಜನ ಆಶೀರ್ವಾದ ಮಾಡ್ತಾರೆ. ಗ್ಯಾರಂಟಿ ಗಳೇ ಕಾಂಗ್ರೆಸ್ ಗೆ ತಿರುಗುಬಾಣ ಆಗುತ್ತೆ, ಚುನಾವಣಾ ಪೂರ್ವದಲ್ಲಿ ಹೇಳಿದ ಗ್ಯಾರಂಟಿ ಬೇರೆ, ಈಗ ಕೊಡುತ್ತೀರುವ ಗ್ಯಾರಂಟಿನೇ ಬೇರೆ, ಕೇಂದ್ರ ದಲ್ಲಿ ಅಧಿಕಾರಕ್ಕೆ ಬರಬೇಕು ಅಂದರೆ  284 ಸ್ಥಾನ ಅಗತ್ಯ , ಕಾಂಗ್ರೆಸ್  ಸ್ಪರ್ಧೆ ಮಾಡುತ್ತಿರುವುದೇ 200 ಸ್ಥಾನ ಆಸುಪಾಸು ಹೇಗೆ ಕಾಂಗ್ರೆಸ್ ಅಧಿಕಾರಕ್ಕೆ  ಬರುತ್ತದೆ. ಕಾಂಗ್ರೆಸ್ ಗೆ ಧೈರ್ಯ ಇದ್ದಿದ್ದರೆ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧೆ  ಮಾಡಬೇಕಿತ್ತುಈ ಚುನಾವಣೆಯಲ್ಲಿ ಕಾಂಗ್ರೆಸ್  ಕೇವಲ 30  ಸ್ಥಾನ  ಮಾತ್ರ ಬರಲಿದೆ  30ಕ್ಕಿಂತ ಕಡಿಮೆ ಸ್ಥಾನ ಸಹ ಈ ಕಾಂಗ್ರೆಸ್ ತಗೊಬಹುದು ಎಂದರು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments