ಬೆಂಗಳೂರು : ಜೈಲಿನಲ್ಲಿರುವ ಆರೋಪಿಗಳಿಗೆ ಜಾಮೀನು ಕೊಡಿಸಲು ಹಾಗೂ ಸರ್ಕಾರದ ಯೋಜನೆಗಳಿಗೂ ಕೂಡ ಬಳಸಲು ಕ್ಷಣಾರ್ಧದಲ್ಲೇ ರೆಡಿಯಾಗುತಿತ್ತು ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್,.ಆರ್ ಟಿ ಸಿಗಳು, ಆರೋಪಿಗಳಿಗೆ ಜಾಮೀನು ಮಂಜೂರ ಆದ್ಮೇಲೆ ಶ್ಯೂರಿಟಿ ಕೊಡಲು ನಕಲಿ ದಾಖಲೆ ಸೃಷ್ಠಿಸುತ್ತಿದ್ದ ಗ್ಯಾಂಗ್. ಶ್ಯೂರಿಟಿ ಜೊತೆಗೆ ನಕಲಿ ವ್ಯಕ್ತಿಯನ್ನ ಕೂಡ ಕಳುಹಿಸುತ್ತಿದ್ದರು. ಕ್ಯಾಟರಿಂಗ್ಗಳಲ್ಲಿ ಕೆಲಸ ಮಾಡ್ತಿದ್ದ ಅಡುಗೆ ಕೆಲಸದವರನ್ನ, ಜೊತೆಗೆ ಸಿನಿಮಾದಲ್ಲಿನ ಸೈಡ್ ಆಕ್ಟರ್ಗಳನ್ನ ಕರೆತರುತ್ತಿದ್ದ ಆರೋಪಿಗಳು ಬಳಿಕ
ನಕಲಿ ಆಧಾರ್ ಕಾರ್ಡ್ ಮೂಲಕ ಪಹಣಿ ಪತ್ರ ನೀಡಿ ಜಾಮೀನು ಕೊಡುಸುತ್ತಿದ್ದ ಖದೀಮರು. ನಕಲಿ ಕಾರ್ಡ್ ಗಳನ್ನು ಸೃಷ್ಟಿ ಮಾಡ್ತಿದ್ದ ಗ್ಯಾಂಗ್ ಕಿಂಗ್ ಪಿನ್ ಮಂಜುನಾಥ್ ಸೇರಿ ಮಂಜುನಾಥ್, ಸಂತೋಷ್, ಆನಂದ್, ಸ್ವರೂಪ್, ಇಂದ್ರೇಶ್, ಪುನೀತ್, ಮನೋಜ್, ಕಲಾಂದರ್, ವಿನಾಯಕ್, ಕೆಂಪೇಗೌಡ ಸೇರಿ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ 43 ರೇಷನ್ ಕಾರ್ಡ್, 139 ಆಧಾರ್ ಕಾರ್ಡ್, 16 ಪಾನ್ ಕಾರ್ಡ್, 35 ಆರ್ ಟಿಸಿ ವಶಕ್ಕೆ ಪಡೆಯಲಾಗಿದೆ.