ಬೆಂಗಳೂರು: ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ ಪ್ರಾರಂಭವಾಗಿದ್ದು ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಾತನಾಡಿದರು.ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ಕೊಡುವ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೆ ತೆರಿಗೆ ಪಡೆಯುವಲ್ಲಿ ರಾಜ್ಯ 10ನೇ ಸ್ಥಾನದಲ್ಲಿದೆ. ವಿವಿಧ ಮೂಲಗಳಿಂದ ಸಿಗಬೇಕಾದ ಸಂಪನ್ಮೂಲ ಸಿಗುತ್ತಿಲ್ಲ. ಈ ಹಿನ್ನಲೆಯಲ್ಲಿ ನಮಗೆ ನ್ಯಾಯ ಮತ್ತು ಧರ್ಮದ ರೀತಿಯಲ್ಲಿ ಸಿಗಬೇಕಾದ ಪಾಲನ್ನು ಪಡೆಯಲು ನನ್ನ ಸರ್ಕಾರವೂ ಎಲ್ಲ ರೀತಿಯಿಂದಲೂ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ರಾಜ್ಯಪಾಲರ ಭಾಷಣದ ಹೈಲೆಟ್ಸ್
ಕಳೆದ 8 ತಿಂಗಳಿನಿಂದ ಅಭಿವೃದ್ಧಿಯ ಹೊಸ ಶಕೆ ನಮ್ಮಲ್ಲಿ ಆರಂಭವಾಗಿದೆ.
ಇದನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುವುದಕ್ಕಾಗಿ ನನ್ನ ಸರ್ಕಾರ ಬದ್ಧವಾಗಿದೆ.
ನನ್ನ ಸರ್ಕಾರ ಪ್ರಾರಂಭಿಸಿರುವ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ.
ರಾಜ್ಯದ ಹೆಚ್ಚಿನ ಭಾಗವು ತೀವ್ರ ಬರ ಪರಿಸ್ಥಿತಿಯನ್ನ ಎದುರಿಸುತ್ತಿದೆ.
ಮುಂಗಾರು ಅವಧಿಯಲ್ಲಿ 240 ತಾಲೂಕುಗಳ ಪೈಕಿ 223 ತಾಲೂಕುಗಳನ್ನ ಬರಪೀಡಿತವೆಂದು.
ಘೋಷಿಸಲಾಗಿದೆ. ಇವುಗಳಲ್ಲಿ 196 ತಾಲೂಕುಗಳನ್ನ ತೀವ್ರ ಬರಪೀಡಿತವೆಂದು ವರ್ಗೀಕರಿಸಲಾಗಿದೆ.
ಬರ ಪರಿಹಾರ ಕೈಗೊಳ್ಳಲು ರಾಜ್ಯ ಸರ್ಕಾರ 31 ಜಿಲ್ಲೆಗಳಿಗೆ 324 ಕೋಟಿ ರೂ, ಬಿಡುಗಡೆ ಮಾಡಿದೆ.
ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡಲು ಟನಲ್ ರಸ್ತೆ ನಿರ್ಮಾಣದ ಉದ್ದೇಶವಿದೆ.
ಮೆಟ್ರೋ ರೈಲು ಮಾರ್ಗ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ವರೆಗೆ ಇರಲಿದ್ದು 33 ಕಿ.ಮೀ ಮಾರ್ಗ ಡಬಲ್ ಡೆಕ್ಕರ್ ಮಾದರಿಯಲ್ಲಿ ನಿರ್ಮಾಣವಾಗಲಿದೆ.
ಬೆಂಗಳೂರು ಮೆಟ್ರೋ ರೈಲು ಹಂತ-2ರಡಿ ಸಿಲ್ಕ್ ಬೋರ್ಡ್ನಿಂದ ಕೆ.ಆರ್ ಪುರದವರೆಗೆ ಒಟ್ಟು 19.75 ಕೀಲೋ ಮೀಟರ್ ಇರಲಿದೆ.
ಕೆ.ಆರ್ ಪುರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಮೆಟ್ರೋ ಕಾಮಗಾರಿಗಳು 2026ರ ಜೂನ್ ಒಳಗೆ ಪೂರ್ಣ ಆಗಲಿವೆ.
ಕರ್ನಾಟಕ ಸರ್ಕಾರ ಹಾಗೂ ರೈಲ್ವೆ ಇಲಾಖೆಗಳ ಸಹಭಾಗಿತ್ವದಲ್ಲಿ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಬೈಯಪ್ಪನಹಳ್ಳಿ -ಚಿಕ್ಕಬಾಣಾವಾರ ಕಾರಿಡಾರ್ ಸಿವಿಲ್ ಕಾಮಗಾರಿ ಪ್ರಗತಿಯಲ್ಲಿದೆ.
ಹೀಲಲಿಗೆ- ರಾಜಾನುಕುಂಟೆ ಕಾರಿಡಾರ್ನ ಸಿವಿಲ್ ಕಾಮಗಾರಿ ಟೆಂಡರ್ ಅನುಮತಿ ಈ 8 ತಿಂಗಳಲ್ಲಿ 77 ಸಾವಿರ ಕೋಟಿಗೂ ಹೆಚ್ಚು ಬಂಡವಾಳವು ರಾಜ್ಯಕ್ಕೆ ಹರಿದು ಬಂದಿದೆ.
ಜನವರಿ ಅಂತ್ಯದವರೆಗೆ ರಾಜ್ಯದ ಜಿಎಸ್‌ಟಿ ಸಂಗ್ರಹಣೆಯಲ್ಲಿ ಇಡೀ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ.
ಬರಗಾಲವಿದ್ದರೂ ರಸ್ತೆ ನೀರು ಶಿಕ್ಷಣ ಆರೋಗ್ಯ ಕೃಷಿ ತೋಟಗಾರಿಕೆ ಹೈನುಗಾರಿಕೆ ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ದಾಖಲಾರ್ಹ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ.
ಬಜೆಟ್ನಲ್ಲಿ ಘೋಷಿಸಿದ ಒಟ್ಟು ಘೋಷಣೆಗಳಲ್ಲಿ ಶೇ.97ರಷ್ಟು ಘೋಷಣೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.