Top Newsರಾಜ್ಯಸುದ್ದಿ

ಹೊಸದುರ್ಗ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ವಿಮಾನಯಾನ ಕನಸು ಈಗ ನನಸು ಮಾಡಿದ ಶಿಕ್ಷಕರು

ಚಿತ್ರದುರ್ಗ: ಸಾಮಾನ್ಯವಾಗಿ ಮಕ್ಕಳು ಬಸ್, ಕಾರು, ಆಟೋ ಸೇರಿದಂತೆ ಮತ್ತಿತರರ ವಾಹನಗಳಲ್ಲಿ ಶಾಲಾ ಪ್ರವಾಸ ಕೈಗೊಂಡಿರುವುದನ್ನು ನಾವು ನೋಡಿದ್ದೇವೆ ಅಥವಾ ಕೇಳಿದ್ದೇವೆ. ಆದರೆ, ಈ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ವಿಮಾನ ಹತ್ತುವ ಮೂಲಕ ಪ್ರವಾಸ ಕೈಗೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಾರಬಗಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ವಿಮಾನದಲ್ಲಿ ಗುರುವಾರ ಪ್ರವಾಸಕ್ಕೆ ತೆರಳಿದ್ದಾರೆ. ಸರ್ಕಾರಿ ಶಾಲೆಯ 19 ವಿದ್ಯಾರ್ಥಿಗಳು, ಮೂವರು ಶಿಕ್ಷಕರು ಶಿವಮೊಗ್ಗದದಿಂದ‌ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ಮಕ್ಕಳು ಮತ್ತು ಶಿಕ್ಷಕರು ಎರಡು ದಿನ ಬೆಂಗಳೂರಿನ ವಿಧಾನಸೌಧ, ಹೈಕೋರ್ಟ್, ವಿಶ್ವೇಶ್ವರಯಂ ಮ್ಯೂಸಿಯಂ, ನೆಹರು ತಾರಾಲಯ, ಬನ್ನೇರುಘಟ್ಟ ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ. ದಾನಿಗಳಿಂದ ನೆರವು ಪಡೆದು ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ.

ವಿಡಿಯೋ ವೈರಲ್‌

ಇದೀಗ ವೀಡಿಯೋ ಕೂಡ ವೈರಲ್ ಆಗಿದೆ. ಶಾಲೆಯ ಶಿಕ್ಷಕ ಯೋಗರಾಜ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರವಾಸ ಕೈಗೊಂಡಿದ್ದು, ವಿದ್ಯಾರ್ಥಿಗಳ ಆಸೆ ಪೂರ್ಣವಾಗಿದೆ. ಜತೆಗೆ ಸರ್ಕಾರಿ ಶಾಲೆಯ ಬಡ ಮಕ್ಕಳ ಆಧುನಿಕ ಹಾಗೂ ಹೈಫೈ ಶೈಕ್ಷಣಿಕ ಪ್ರವಾಸದ ಆಸೆ ಈಡೇರಿದಂತಾಗಿದೆ.

ಹೊಸದುರ್ಗದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ವಿಮಾನ ಮೂಲಕ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದೆವು. ಮುದ್ದೇನಹಳ್ಳಿ, ಈಶಾ ಫೌಂಡೇಶನ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಲಾಲ್ ಬಾಗ್, ಜಲ ಸಾರಿಗೆ ಹಾಗೂ ಮೆಟ್ರೋ ತೋರಿಸಲಾಗಿದೆ. ಇನ್ನು ಒಂದಿಷ್ಟು ಪ್ರವಾಸ ಸ್ಥಳಗಳಿದ್ದು, ಅವುಗಳನ್ನು ತೋರಿಸಲಾಗುತ್ತದೆ. ಆಧುನಿಕ ಶಿಕ್ಷಣದ ವ್ಯವಸ್ಥೆಯಲ್ಲಿ ಮಕ್ಕಳಿಗೆ ಎಲ್ಲವನ್ನೂ ತೋರಿಸಬೇಕು ಕಲಿಕೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಮಕ್ಕಳನ್ನು ವಿಮಾನದಲ್ಲಿ ಪ್ರವಾಸ ಮಾಡಿಸಲಾಗುತ್ತಿದೆ ಎಂದು ಶಿಕ್ಷಕ ಯೋಗರಾಜ್

 

Comments (0)

Your email address will not be published. Required fields are marked *

Back to top button