Wednesday, February 11, 2026
25.7 C
Bengaluru
Google search engine
LIVE
ಮನೆ#Exclusive NewsTop Newsಸಾಲಗಾರರಿಗೆ ಬಂಪರ್ ಆಫರ್ ನೀಡಿದ ಸರ್ಕಾರ; ಬಡ್ಡಿ ಮನ್ನಾ ಅಗಲಿದ್ಯಾ..?

ಸಾಲಗಾರರಿಗೆ ಬಂಪರ್ ಆಫರ್ ನೀಡಿದ ಸರ್ಕಾರ; ಬಡ್ಡಿ ಮನ್ನಾ ಅಗಲಿದ್ಯಾ..?

ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಲು ‘ಒನ್ ಟೈಮ್ ಸೆಟ್ಲ್‌ಮೆಂಟ್’ ಯೋಜನೆಗೆ ಅನುಮೋದನೆ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. 2013-14 ರಿಂದ 2018-19ರ ಅವಧಿಯಲ್ಲಿ ವಿತರಿಸಲಾದ ಸಾಲಗಳಿಗೆ ಈ ಸೌಲಭ್ಯ ಅನ್ವಯವಾಗಲಿದ್ದು, ಸಚಿವ ಸಂಪುಟದ ನಿರ್ಧಾರವು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಸುಮಾರು 1.94 ಲಕ್ಷ ಫಲಾನುಭವಿಗಳು ಪಡೆದಿರುವ ಸಾಲದ ಮೇಲಿನ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತಿದ್ದು, ಅವರು ಕೇವಲ ಮೂಲ ಸಾಲದ ಮೊತ್ತವನ್ನು ಮರುಪಾವತಿಸಿದರೆ ಸಾಕು ಎಂದು ತಿಳಿಸಲಾಗಿದೆ. ಮೂಲ ಸಾಲದ ಒಟ್ಟು ಮೊತ್ತ 981 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಈವರೆಗೆ ಕೇವಲ 98.18 ಕೋಟಿ ರೂಪಾಯಿ ಮಾತ್ರ ವಸೂಲಾಗಿದೆ. ಇನ್ನುಳಿದ 714.13 ಕೋಟಿ ರೂಪಾಯಿ ಬಾಕಿ ಇರುವ ಹಿನ್ನೆಲೆಯಲ್ಲಿ, ಬಡ್ಡಿ ಮನ್ನಾ ಮಾಡುವ ಮೂಲಕ ಕನಿಷ್ಠ 150 ಕೋಟಿ ರೂಪಾಯಿ ಮೂಲಧನವನ್ನಾದರೂ ವಸೂಲಿ ಮಾಡಬಹುದು ಎಂಬುದು ನಿಗಮದ ಲೆಕ್ಕಾಚಾರವಾಗಿದೆ.

ಸ್ವತಃ ಸರ್ಕಾರದ ಹಣಕಾಸು ಇಲಾಖೆಯೇ ವಿರೋಧ ವ್ಯಕ್ತಪಡಿಸಿರುವುದು ಕುತೂಹಲ ಮೂಡಿಸಿದೆ. ಒಂದು ನಿಗಮಕ್ಕೆ ಇಂತಹ ವಿನಾಯಿತಿ ನೀಡಿದರೆ, ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ನಿಗಮ ಸೇರಿದಂತೆ ಇತರ ಹಿಂದುಳಿದ ವರ್ಗಗಳ ನಿಗಮಗಳಿಂದಲೂ ಇಂತಹುದೇ ಬೇಡಿಕೆಗಳು ಬರುತ್ತವೆ ಮತ್ತು ಇದು ಸರ್ಕಾರದ ಖಜಾನೆಯ ಮೇಲೆ ಭಾರಿ ಹೊರೆ ಉಂಟುಮಾಡುತ್ತದೆ ಎಂದು ಇಲಾಖೆ ಎಚ್ಚರಿಸಿದೆ.

ಬಿಜೆಪಿ ನಾಯಕರು ಈ ನಿರ್ಧಾರದ ವಿರುದ್ಧ ಮುಗಿಬಿದ್ದಿದ್ದು, ರೈತರ ಸಾಲ ಮನ್ನಾ ಅಥವಾ ದಲಿತ ಮತ್ತು ಹಿಂದುಳಿದ ವರ್ಗಗಳ ನಿಗಮಗಳ ಸಾಲದ ವಿಷಯದಲ್ಲಿ ಸರ್ಕಾರ ಏಕೆ ಇಂತಹ ಉದಾರತೆ ತೋರುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಿ.ಟಿ. ರವಿ ಅವರಂತಹ ನಾಯಕರು, ಸರ್ಕಾರವು ಆರ್ಥಿಕ ಶಿಸ್ತನ್ನು ಗಾಳಿಗೆ ತೂರಿ ಕೇವಲ ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments