
ನಾಳೆ ನಾಡಿದ್ದು ಗೌರಿ – ಗಣೇಶ ಹಬ್ಬದ ಹಿನ್ನೆಲೆ ಗೌರಿ – ಗಣೇಶ ಹಬ್ಬಕ್ಕೆ ಹೊರ ಜಿಲ್ಲೆಯಲ್ಲೂ ಬಿಎಂಟಿಸಿ ಬಸ್ ಗಳು ಕಾರ್ಯಾ ಮಾಡಲಿವೆ. ಕೆಎಸ್ಆರ್ಟಿಸಿಯಲ್ಲಿ ಬಸ್ ಗಳ ಕೊರತೆ ಇದ್ದು,ಬಿಎಂಟಿಸಿ ಬಸ್ ಗಳನ್ನ ಬಳಸಿಕೊಳ್ಳಲು ಕೆಎಸ್ಆರ್ಟಿಸಿ ನಿರ್ಧಾರ ಮಾಡಿದೆ. ಹಬ್ಬಕ್ಕೆ ಹೆಚ್ಚುವರಿ 200 ಬಿಎಂಟಿಸಿ ಬಸ್ ಗಳಿಗೆ ಕೆಎಸ್ಆರ್ಟಿಸಿ ಮನವಿ ಮಾಡಿದ್ದು, ಬಿಎಂಟಿಸಿ ಬಸ್ ಗಳು ಶಿವಮೊಗ್ಗ, ಧಾರವಾಡ, ತುಮಕೂರು , ಕೋಲಾರ, ಮೈಸೂರಿ ಬಾಗದಲ್ಲಿ ಕಾರ್ಯಾ ವಹಿಸಲಿವೆ. ನಾಳೆಯಿಂದ 200 ಬಸ್ ಗಳು ಕೆಎಸ್ಆರ್ಟಿಸಿ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿದ್ದು,ಈಗಾಗಲೇ ಹಬ್ಬಕ್ಕೆ 1500 ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡ್ತಿರೋ ಕೆಎಸ್ಆರ್ಟಿಸಿ ಆದ್ರೂ ಹೆಚ್ಚುವರಿ ಬಸ್ ಗಳಿಗೆ ಬೇಡಿಕೆ ಮಾಡಿದೆ. ಬೇಡಿಕೆ ಬಂದ್ರೆ ಮತ್ತಷ್ಟು ಬಸ್ ಗಳನ್ನ ನೀಡುತ್ತೇವೆ ಎಂದು ಬಿಎಂಟಿಸಿ ಸಂಚಾರಿ ವಿಭಾಗದ ಮುಖ್ಯಸ್ಥ ಪ್ರಭಾಕರ ರೆಡ್ಡಿ ಹೇಳಿಕೊಂಡಿದ್ದಾರೆ..


