ಸುದ್ದಿ

ಖೈದಿಗಳಿಗೆ ಸರ್ಕಾರದಿಂದ ಸಿಹಿಸುದ್ದಿ..!

ಜೈಲಿನಲ್ಲಿರುವ ಖೈದಿಗಳಿಗೆ ಸರ್ಕಾರ ಗುಡ್​​ನ್ಯೂಸ್ ಕೊಟ್ಟಿದೆ​.. ಅಂಬೇಡ್ಕರ್ ಜಯಂತಿಯಂದು ಖೈದಿಗಳಿಗೆ ಸಿಹಿ ನೀಡಲು ಹಂಚಿಕೆಗೆ ಸರ್ಕಾರ ಆದೇಶ ಹೊರಡಿಸಿದೆ..ಅಂಬೇಡ್ಕರ್ ಜಯಂತಿ ಅಷ್ಟೇ ಅಲ್ಲದೇ ಬುದ್ದ ಪೂರ್ಣಿಮೆ ಪ್ರಯುಕ್ತ ಎಲ್ಲಾ ಜೈಲುಗಳಲ್ಲಿ ಖೈದಿಗಳಿಗೆ ಸಿಹಿ ತಿಂಡಿ ನೀಡಲು ಆದೇಶ, ಈಗಾಗಲೇ ಖೈದಿಗಳಿಗೆ ಸ್ವೀಟ್ ಕೊಡಿಸಲು ಕಾರಾಗೃಹ ಇಲಾಖೆ 5 ಕೋಟಿ ಮಂಜೂರು ಮಾಡಿದೆ.ಈಗಾಗಲೇ ಗಣರಾಜ್ಯೋತ್ಸವ, ಯುಗಾದಿ ಹಬ್ಬ, ಬಸವ ಜಯಂತಿ, ಸ್ವತಂತ್ರ ದಿನಾಚರಣೆ ದಿನ, ರಂಜಾನ್, ಆಯುಧ ಪೂಜೆ, ಗಾಂಧಿ ಜಯಂತಿ, ಕ್ರಿಸ್ಮಸ್, ಬಕ್ರೀದ್, ಸಂಕ್ರಾಂತಿ ಗಣೇಶ ಹಬ್ಬದಂದು ಸಿಹಿಯೂಟ ನೀಡಲಾಗ್ತಿತ್ತು..ಆದ್ರೆ ಈಗ ಅಂಬೇಡ್ಕರ್ ಜಯಂತಿ ದಿನವೂ ಸಿಹಿ ನೀಡಲು ಸರ್ಕಾರ ಆದೇಶ ಹೊರಡಿಸಿದೆ..

 

Comments (0)

Your email address will not be published. Required fields are marked *

Back to top button