Freedom TV

ಬಿಗ್ ಬಾಸ್ ಧನುಷ್-ಸ್ಪಂದನಾ ಕಡೆಯಿಂದ ಗುಡ್ ನ್ಯೂಸ್; ವೈರಲ್ ಆಗ್ತಿದೆ ‘ಜಿನುಗೋ ಮಳೆ’ ಮೋಷನ್ ಪೋಸ್ಟರ್!

ಬಿಗ್ ಬಾಸ್ ಕನ್ನಡ ಸೀಸನ್ 12’ರ ಜನಪ್ರಿಯ ಸ್ಪರ್ಧಿಗಳಾದ ಧನುಷ್ ಹಾಗೂ ಸ್ಪಂದನಾ ಅವರು ಇದೀಗ ಹೊಸ ಪ್ರಾಜೆಕ್ಟ್ ಒಂದನ್ನು ಘೋಷಿಸುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

ಹಲವರು ಇವರು ಬೆಳ್ಳಿತೆರೆಗೆ ಕಾಲಿಡಲಿದ್ದಾರೆ ಎಂದು ಅಂದುಕೊಂಡಿದ್ದರೂ, ಸದ್ಯಕ್ಕೆ ಇವರಿಬ್ಬರು ‘ಜಿನುಗೋ ಮಳೆ’ ಎಂಬ ಸುಂದರ ಆಲ್ಬಂ ಸಾಂಗ್ ಮೂಲಕ ಒಂದಾಗುತ್ತಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಈ ಜೋಡಿಯನ್ನು ಮತ್ತೆ ಪರದೆಯ ಮೇಲೆ ನೋಡಲು ಕಾತರರಾಗಿದ್ದ ಅಭಿಮಾನಿಗಳಿಗೆ ಸಂಭ್ರಮ ತಂದಿದೆ.

ಈ ಆಲ್ಬಂ ಸಾಂಗ್ ಅನ್ನು ಆಕಾಶ್ ಉನ್ನಿಕೃಷ್ಣನ್ ಅವರು ನಿರ್ದೇಶಿಸುತ್ತಿದ್ದು, ಯುನಿಕಾರ್ನ್ ಎಂಟರ್ಟೇನ್ಮೆಂಟ್ ಸಂಸ್ಥೆಯು ಬಹಳ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದೆ. ಬಿಗ್ ಬಾಸ್ ವೇದಿಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಧನುಷ್ ಮತ್ತು ಸ್ಪಂದನಾ ಅವರ ಕೆಮಿಸ್ಟ್ರಿ ಈ ಹಾಡಿನಲ್ಲಿ ಹೇಗೆ ಮೂಡಿಬರಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಹೊಸ ಪ್ರಾಜೆಕ್ಟ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ‘ಜಿನುಗೋ ಮಳೆ’ಯ ಲೇಟೆಸ್ಟ್ ಅಪ್‌ಡೇಟ್‌ಗಳಿಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

Comments (0)

Your email address will not be published. Required fields are marked *

Back to top button