ಬೆಂಗಳೂರು: ದೇವನಹಳ್ಳಿ ತಾಲೂಕಿನ ರಾಯಸಂದ್ರದ ನಿವಾಸಿಗಳಿಗೆ ಗುಡ್ನ್ಯೂಸ್ವೊಂದು ಸಿಕ್ಕಿದೆ. ಸತತ ಎಂಟತ್ತು ವರ್ಷಗಳಿಂದ ಗ್ರಾಮಸ್ಥರು ಬಡ ನಿವೇಶನಗಳಿಗಾಗಿ ತಾಲೂಕು ಕಚೇರಿ ಸುತ್ತಾಡಿದ್ದರು ಯಾವುದೇ ಪ್ರಯೋಜನೆ ಆಗಿರಲಿಲ್ಲ. ಆದ್ರೀಗ ರಾಯಸಂದ್ರದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಹ ಸಮಯ ಬಂದಿದೆ.
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ, ರಾಯಸಂದ್ರ ಗ್ರಾಮದ ಸರ್ಕಾರಿ ಗೋಮಾಳ ಸರ್ವೇ ನಂಬರ್ 44ರಲ್ಲಿ ಬಡ ನಿವೇಶನ ರಹಿತರಿಗೆ ಸೈಟ್ ನೀಡಲು ದೇವನಹಳ್ಳಿ ತಾಲ್ಲೂಕು ಆಡಳಿತ ಮುಂದಾಗಿದೆ. ಮೊದಲ ಹೆಜ್ಜೆಯಂತೆ ಸರ್ವೇ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಬಡವರಿಗೆ ಸೈಟ್ ಒದಗಿಸುವ ಕಾರ್ಯ ತಾಲೂಕು ಆಡಳಿತ ಕಚೇರಿ ಮಾಡಲಿದೆ ಎಂದು ದೇವನಹಳ್ಳಿ ತಾಲೂಕು ತಹಶೀಲ್ದಾರ್ ಹೆಚ್. ಬಾಲಕೃಷ್ಣ ಅವರು ತಿಳಿಸಿದರು. ಇನ್ನು ಹೋರಾಟದ ಮುಂದಾಳತ್ವ ವಹಿಸಿದ್ದ ರಾಯಸಂದ್ರ ಸೋಮಣ್ಣ ಅವರು ಸರ್ವೇ ಕಾರ್ಯಕ್ಕೆ ಚಾಲನೆ ಕೊಟ್ಟಿರುವುದು ನನಗೆ ಮತ್ತು ಗ್ರಾಮದ ಜತೆಗೆ ತುಂಬಾ ಸಂತಸ ತಂದಿದೆ ಎಂದು ತಿಳಿಸಿದರು. ಇನ್ನು ಸರ್ವೇ ಕಾರ್ಯದಲ್ಲಿ ರಾಯಸಂದ್ರದ ಗ್ರಾಮಸ್ಥರು ಭಾಗಿಯಾಗಿದ್ದರು.