ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಬಡ್ಡಿ ದರವನ್ನು ಇಳಿಕೆ ಮಾಡಲು ನಿರ್ಧರಿಸಿದೆ. ಕಳೆದ ಬಾರಿ ಫೆಬ್ರವರಿಯಲ್ಲಿ ಬಡ್ಡಿದರವನ್ನು 25 ಬೇಸಿಸ್ ಪಾಯಿಂಟ್ ತಗ್ಗಿಸಿತ್ತು.
ಇಂದು ಆರ್‌ಬಿಐ ಸತತ ಎರಡನೇ ಬಾರಿಗೆ ಬಡ್ಡಿ ದರ ಇಳಿಕೆ ಮಾಡಿದೆ. ಆದ್ರೀಗ ಬಡ್ಡಿ ದರ ಮತ್ತೆ ಇಳಿಕೆಯಾಗಿರುವುದರಿಂದ ಸಾರ್ವಜನಿಕರಿಗೆ ಹೋಮ್ ಲೋನ್, ಇಎಂಐ ಮೇಲಿನ ಬಡ್ಟಿ ಕೂಡ ಇಳಿಕೆಯಾಗಲಿದೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಇಂದಿನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ್ರು. ರೆಪೋ ದರವನ್ನು 0.25% ಇಳಿಕೆ ಮಾಡಲು ನಿರ್ಧರಿಸಿದೆ. ಆರ್‌ಬಿಐ ಸಭೆಯಲ್ಲಿ ಭಾಗಿಯಾಗಿದ್ದ ಬಹುತೇಕ ಸದಸ್ಯರು ಬಡ್ಡಿ ದರ ತಗ್ಗಿಸಲು ಸಮ್ಮತಿ ಸೂಚಿಸಿದ್ದು, 6.25% ರಿಂದ 6%ಗೆ ರೆಪೋ ದರವನ್ನು ತಗ್ಗಿಸಿದೆ. ಕಳೆದ ಬಾರಿ ಫೆಬ್ರವರಿಯಲ್ಲೂ ಕೂಡ ಆರ್‌ಬಿಐ ರೆಪೋ ದರವನ್ನು 0.25% ತಗ್ಗಿಸಿತ್ತು.