Freedom TV

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್..! ನಾಳೆಯಿಂದ ಹೊಸ ಟಿಕೆಟ್ ದರ..

ಬೆಂಗಳೂರು: ಮೆಟ್ರೋ ದರ ಇಳಿಕೆ ಸಂಬಂಧ ಸ್ವಲ್ಪ ಬದಲಾವಣೆ ಮಾಡಲಾಗುತ್ತದೆ. ಶೀಘ್ರದಲ್ಲೇ ಪರಿಷ್ಕೃತ ದರ ಪ್ರಕಟಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಎಂಡಿ ಮಹೇಶ್ವರ್‌ ರಾವ್‌ ಹೇಳಿದ್ದಾರೆ

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲೆಲ್ಲಿ 90%, 100% ಜಂಪ್ ಆಗಿದೆಯೋ ಎಲ್ಲೆಲ್ಲಿ ಬದಲಾವಣೆ ಮಾಡುತ್ತೇವೆ. ಸ್ವಲ್ಪ ರಿಲೀಫ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಈ ಬಗ್ಗೆ ನಿನ್ನೆಯಿಂದ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ಇತ್ತೀಚಿಗೆ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿ BMRCL ಪ್ರಕಟನೆ ಹೊರಡಿಸಿತ್ತು.
ಮೆಟ್ರೋ ದರ ಇಳಿಕೆ ಮಾಡುವಂತೆ ಫ್ರೀಡಂ ಟಿವಿ ನಿರಂತರವಾಗಿ ಅಭಿಯಾನ ನಡೆಸುತ್ತಿತ್ತು. ಸಾರ್ವಜನಿಕರಿಂದಲೂ ಬಿಎಂಆರ್‌ಸಿಎಲ್‌ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿತ್ತು. ವಿರೋಧ ಜಾಸ್ತಿ ಆಗುತ್ತಿದ್ದಂತೆ ಎಚ್ಚೆತ್ತ ಬಿಎಂಆರ್‌ಸಿಎಲ್‌ ದರವನ್ನು ಇಳಿಸಲು ಮುಂದಾಗಿದೆ.

ನಾಳೆಯಿಂದಲೇ ಹೊಸ ಟಿಕೆಟ್ ರೇಟ್‌!
ಟಿಕೆಟ್ ದರ ಜಂಪ್ ಆಗಿರುವ ಕಡೆ ಸರಿ ಪಡಿಸುತ್ತೇವೆ ಎಂದಿರುವ BMRCL ನಾಳೆಯಿಂದಲೇ ಹೊಸ ಟಿಕೆಟ್ ಸ್ಲಾಬ್ ಜಾರಿಗೆ ತರುತ್ತಿದೆ. 90%-100% ಕಡೆ ನಾಳೆಯಿಂದಲೇ ಬದಲಾವಣೆ ಆಗುತ್ತಿದೆ.

ಮಿನಿಮಮ್ 10 ರಿಂದ 90 ರೂಪಾಯಿ ಇದ್ದು, ಇದರಲ್ಲಿ ಯಾವುದೇ ಬದಲಾವಣೆ ಆಗಲ್ಲ. ಇವತ್ತು ರಾತ್ರಿಯೇ ಕರೆಕ್ಷನ್ ಮಾಡಿ, ನಾಳೆಯಿಂದ 46% ಮೆಟ್ರೋ ಟಿಕೆಟ್ ದರ ಏರಿಕೆ ಆಧಾರದಲ್ಲಿ ಟಿಕೆಟ್ ವಿತರಣೆ ಮಾಡುತ್ತೇವೆ ಎಂದು BMRCL ಎಂಡಿ ಸ್ಪಷ್ಟಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button