ಬೆಂಗಳೂರು: ಬೇಸಿಗೆಯ ಬಿಸಿಲಿನಿಂದ ಕೊಂಚ ಬಿಡುವು ಪಡೆಯಲು ಹಾತೊರೆಯುತ್ತಿರುವ ಬೆಂಗಳೂರಿನ ನಿವಾಸಿಗಳಿಗೆ ಸಂತಸದ ಸುದ್ದಿ ಐಎಂಡಿ ನೀಡಿದೆ. ಮೇ ಆರಂಭದಲ್ಲಿ ಭಾರತದ ಸಿಲಿಕಾನ್ ವ್ಯಾಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ಸಿಕ್ಕಿದೆ.
ಮೇ 1 ರಿಂದ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಮಳೆ ಪಡೆಯಲಿದೆ ಎಂದು ಮಧ್ಯಮ-ಶ್ರೇಣಿಯ ಹವಾಮಾನ ಮುನ್ಸೂಚನೆಗಳ ಕೇಂದ್ರ (ECMWF) ಸೂಚನೆ ನೀಡಿದೆ.
ಆದರೆ ಜಿಎಫ್ಎಸ್ ಮೇ 1 ರಿಂದ ಮತ್ತು ನಂತರ ಸ್ಥಿರವಾಗಿ 6 ರಿಂದ ಮಳೆ ಬರಲಿದೆ ಎಂದು ಹೇಳಿದೆ. ಮತ್ತೊಂದು ಹವಾಮಾನ ಮಾದರಿ ಸಿಎಫ್ಎಸ್ ಮೇ 3 ರಂದು ಮಳೆ ಬರಲಿದೆ ಎಂದು ಹೇಳಿದೆ.