ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ, ಇದೇ ವೇಳೆ ಅವರ ಹೊಸ ಸಿನಿಮಾದ ಪೋಸ್ಟರ್ ಒಂದು ರಿಲೀಸ್ ಆಗಿದೆ. ಅದರಲ್ಲಿ ಗಣೇಶ್ ಅವರು ಹನುಮಂತನ ವೇಷ ಧರಿಸಿದ್ದಾರೆ.
ಗಣೇಶ್ ಅವರು ಸಧ್ಯ ಪಿನಾಕ ಮತ್ತು ಯುವರ್ಸ್ ಸಿನ್ಸಿಯರ್ಲಿ ರಾಮ್ ಎಂಬ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಮ್ (Yours Sincerely Raam) ಸಿನಿಮಾ ತಂಡ ಇದೀಗ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಇದರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಆಂಜನೇಯನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಹನುಮಂತ ಇಲ್ಲಿ ಲೆಟರ್ ಒಂದನ್ನು ಕೊಡುತ್ತಿರುವ ರೀತಿ ಇದೆ. ರಾಮ ಹಾಗೂ ಸೀತೆಯನ್ನು ಸೇರಿಸಲು ಗಣೇಶ್ ಇಲ್ಲಿ ಹನುಮಂತನಾಗಿರಬಹುದು ಎಂಬ ಚರ್ಚೆ ಶುರುವಾಗಿದೆ.


