Tuesday, January 27, 2026
24 C
Bengaluru
Google search engine
LIVE
ಮನೆದೇಶ/ವಿದೇಶಗೋವಾ ನೈಟ್‌ಕ್ಲಬ್ ಮಾಲೀಕರಾದ ಲೂತ್ರಾ ಸಹೋದರರ ಬಂಧನ

ಗೋವಾ ನೈಟ್‌ಕ್ಲಬ್ ಮಾಲೀಕರಾದ ಲೂತ್ರಾ ಸಹೋದರರ ಬಂಧನ

ನವದೆಹಲಿ: ಗೋವಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಲೂತ್ರಾ ಸಹೋದರರಾದ ಗೌರವ್ ಮತ್ತು ಸೌರಭ್ ಅವರನ್ನು ಥೈಲ್ಯಾಂಡ್‌ನಿಂದ ಗಡೀಪಾರು ಮಾಡಲಾಗಿದೆ. ಇಂದು ಅವರನ್ನು ದೆಹಲಿಗೆ ಕರೆತರಲಾಯಿತು. ಗೋವಾದ ನೈಟ್​​ಕ್ಲಬ್​ನಲ್ಲಿ ಬೆಂಕಿ ಅವಘಡ ಉಂಟಾದ ನಂತರ ಅವರಿಬ್ಬರೂ ಭಾರತ ಬಿಟ್ಟು ಥೈಲ್ಯಾಂಡ್​​ಗೆ ಪರಾರಿಯಾಗಿದ್ದರು. ಇಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಗೋವಾ ಪೊಲೀಸರು ಆ ಇಬ್ಬರು ಸಹೋದರರನ್ನು ಬಂಧಿಸಿದರು.

ಈ ತಿಂಗಳ ಆರಂಭದಲ್ಲಿ ಉತ್ತರ ಗೋವಾದ ಅರ್ಪೋರಾದಲ್ಲಿರುವ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನಲ್ಲಿ ಜನದಟ್ಟಣೆಯ ಕಾರ್ಯಕ್ರಮದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿತು. 25 ಜನರು ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು. ನೈಟ್ ಕ್ಲಬ್‌ನಲ್ಲಿ ಅಗ್ನಿ ಸುರಕ್ಷತಾ ಮಾನದಂಡಗಳು, ಪರವಾನಗಿ ಷರತ್ತುಗಳು ಮತ್ತು ಇತರ ಶಾಸನಬದ್ಧ ಅವಶ್ಯಕತೆಗಳ ಉಲ್ಲಂಘನೆಯ ಆರೋಪದ ಮೇಲೆ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments